ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಸ್‌ನಿಂದ ಅಲ್ಲ, ರೋಗನಿರೋಧಕ ಶಕ್ತಿ ಕೊರತೆಯಿಂದ ಸೋಂಕಿತರ ಸಾವು

ಕೋವಿಡ್‌–19 ವೈರಸ್‌ನಿಂದ ಸತ್ತವರು ಕಡಿಮೆ | ಸಂಶೋಧನಾ ವರದಿಯಲ್ಲಿ ಬಹಿರಂಗ‌
ಅಕ್ಷರ ಗಾತ್ರ

‘ರೋಗನಿರೋಧಕ ಶಕ್ತಿ ಕೊರತೆಯಿಂದ ಕೋವಿಡ್‌–19 ಸೋಂಕಿತರು ಸಾವನ್ನಪ್ಪುತ್ತಿದ್ದಾರೆಯೇ ಹೊರತು, ವೈರಸ್‌ನಿಂದ ಅಲ್ಲ’ ಎಂದು ಬ್ರಿಟನ್‌ನ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದಸಂಶೋಧಕರ ತಂಡ ಸ್ಪಷ್ಟಪಡಿಸಿದೆ.

11 ಸೋಂಕಿತರ ರೋಗನಿರೋಧಕ ಶಕ್ತಿಯ ಕುರಿತು ಅಧ್ಯಯನ ಕೈಗೊಂಡಿದ್ದ ಈ ತಂಡವು, ರೋಗನಿರೋಧಕ ಶಕ್ತಿ ಮತ್ತು ವೈರಸ್‌ ನಡುವೆ ಪರಸ್ಪರ ಸಂಬಂಧವಿದೆ ಎಂದು ಹೇಳಿದೆ.

ರೋಗನಿರೋಧಕ ಶಕ್ತಿ ಕಡಿಮೆ ಇರುವ ಕೋವಿಡ್‌–19ಸೋಂಕಿತರ ಅಂಗಾಂಗಗಳು ಹಾನಿಗೀಡಾಗುವ ಸಾಧ್ಯತೆ ಹೆಚ್ಚು ಎಂದು‘ನೇಚರ್‌’ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಈ ವಿಷಯವನ್ನು ತಿಳಿಸಿದೆ.

ದೇಹದಲ್ಲಿ ರೋಗವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಇಲ್ಲದ ವ್ಯಕ್ತಿಗಳು ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ. ರೋಗನಿರೋಧಕ ಶಕ್ತಿ ಚೆನ್ನಾಗಿದ್ದರೆ ಕೊರೊನಾ ಸೊಂಕಿಗೆ ಹೆದರುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT