ಭಾನುವಾರ, ಜೂಲೈ 5, 2020
22 °C

Covid-19 World Update| ಅಂದಾಜು ಒಂದು ಕೋಟಿ ಜನರಿಗೆ ಸೋಂಕು 

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಜಗತ್ತಿನ ಅಂದಾಜು ಒಂದು ಕೋಟಿ ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್‌ ಹೇಳಿದೆ. ಇದು ಏಳು ತಿಂಗಳಲ್ಲಿ ಸುಮಾರು ಐದು ಲಕ್ಷ ಜನರನ್ನು ಬಲಿ ತೆಗೆದುಕೊಂಡಿರುವ ಉಸಿರಾಟ ಸಂಬಂಧಿ ಕಾಯಿಲೆಯಾದ ಕೋವಿಡ್‌-19 ಕಾಯಿಲೆಯ ಪ್ರಮುಖ ಮೈಲುಗಲ್ಲು ಎಂದು ಅದು ಹೇಳಿದೆ. 

ಅಮೆರಿಕದ ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೋವಿಡ್‌ ಟ್ರ್ಯಾಕರ್‌ ವೆಬ್‌ಸೈಟ್‌ನಲ್ಲೂ ಇದೇ ಅಂಕಿ ಅಂಶಗಳನ್ನು ಉಲ್ಲೇಖಿಸಲಾಗಿದೆ. ವೆಬ್‌ಸೈಟ್‌ ಪ್ರಕಾರ ಜಗತ್ತಿನ 99,50,945 ಮಂದಿಗೆ ಸೋಂಕು ತಗುಲಿದ್ದು, 4,98,135 ಮಂದಿ ಮೃತಪಟ್ಟಿದ್ದಾರೆ. 

ಕೊರೊನಾ ವೈರಸ್‌ನ ತೀವ್ರ ಹೊಡೆತಕ್ಕೆ ಸಿಲುಕಿರುವ ಹಲವು ದೇಶಗಳು ಲಸಿಕೆ ಕಂಡು ಹಿಡಿಯುವುದಕ್ಕೂ ಮೊದಲೇ ಲಾಕ್‌ಡೌನ್‌ ಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಸಡಿಲಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡಲಾರಂಭಿಸಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. 

ಕೆಲವು ದೇಶಗಳಲ್ಲಿ ಸೋಂಕು ಮತ್ತೆ ಉಲ್ಬಣವಾಗಲು ಆರಂಭಿಸಿದೆ. ಹೀಗಾಗಿ ಅಲ್ಲಿ ಆಡಳಿತಗಳು ಲಾಕ್‌ಡೌನ್‌ ನಿಯಮಗಳನ್ನು ಮರಳಿ ಜಾರಿಗೆ ತರುತ್ತಿವೆ. ತಜ್ಞರು ಹೇಳುವ ಪ್ರಕಾರ ಮುಂಬರುವ ತಿಂಗಳುಗಳಲ್ಲಿ ಮತ್ತು 2021 ರವರೆಗೆ ವೈರಸ್‌ ಮೇಲಿಂದ ಮೇಲೆ ದಾಳಿ ನಡೆಸಬಹುದು ಎಂದು ಹೇಳಲಾಗುತ್ತಿದೆ. 

ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿರುವುದಾಗಿ ಚೀನಾ ಜ.10ರಂದು ಘೋಷಣೆ ಮಾಡಿತ್ತು. ಇದಾದ ನಂತರ ಐರೋಪ್ಯ ರಾಷ್ಟ್ರಗಳನ್ನು ಭಾದಿಸಿರುವ ಕೊರೊನಾ ವೈರಸ್‌ ಸೋಂಕು ನಂತರ ಅಮೆರಿಕ, ದಕ್ಷಿಣ ಅಮೆರಿಕ ರಾಷ್ಟ್ರ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಉಲ್ಬಣಗೊಂಡಿದೆ. ಈ ಪೈಕಿ ಬ್ರೆಜಿಲ್‌ ಮತ್ತು ಭಾರತ ಕೊರೊನಾ ವೈರಸ್‌ನ ಹಾಟ್‌ಸ್ಪಾಟ್‌ಗಳಾಗಿ ಮಾರ್ಪಾಟಾಗಿವೆ ಎಂದು ರಾಯಿಟರ್ಸ್‌ ಹೇಳಿದೆ. 

ವಿಶ್ವದಲ್ಲಿ ಸೋಂಕಿಗೆ ತುತ್ತಾಗಿರುವ ಅಂದಾಜು ಒಂದು ಕೋಟಿ ಜನರ ಪೈಕಿ ಅರ್ಧದಷ್ಟು ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 

ಅತಿ ಹೆಚ್ಚು ಸೋಂಕು ಹೊಂದಿರುವ 5 ದೇಶಗಳು
ಆವರಣದಲ್ಲಿ ಸಾವಿನ ಸಂಖ್ಯೆ 

  1. ಅಮೆರಿಕ– 25,07,930 (125,504)
  2. ಬ್ರೆಜಿಲ್‌– 1,313,667 (57,070)
  3. ರಷ್ಯಾ– 626,779 (8,958)
  4. ಭಾರತ– 508,953 (15685)
  5. ಬ್ರಿಟನ್‌– 311,727 (43,598)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು