ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | 60 ಲಕ್ಷ ಸೋಂಕಿತರು ಗುಣಮುಖ; 47 ಲಕ್ಷ ಸಕ್ರಿಯ ಪ್ರಕರಣ

ಅಕ್ಷರ ಗಾತ್ರ

ನ್ಯೂಯಾರ್ಕ್‌:ಪ್ರಪಂಚದಾದ್ಯಂತ ಒಟ್ಟು 60 ಲಕ್ಷಕ್ಕೂ ಹೆಚ್ಚು ಕೋವಿಡ್–19 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾವೈರಸ್‌ ಸಂಶೋದನಾ ಕೇಂದ್ರ ಮಾಹಿತಿ ನೀಡಿದೆ.

ಇದುವರೆಗೆ ಒಟ್ಟು11,449,707ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, ಇದರಲ್ಲಿ61,79,006 ಮಂದಿ ಗುಣಮುಖರಾಗಿದ್ದಾರೆ. 47,36,434 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು,5,34,267 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಅಮೆರಿಕದಲ್ಲಿ ಒಂದೇ ದಿನ 39 ಸಾವಿರ ಸೋಂಕು ಪ್ರಕರಣ
ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ ಬರೋಬ್ಬರಿ 39,379 ಜನರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ.ಇದರೊಂದಿಗೆ ಈ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28,88,635ಕ್ಕೆ ಏರಿಕೆಯಾಗಿದೆ. ಜೊತೆಗೆ ಭಾನುವಾರ ಒಂದೇದಿನ 234 ಸಾವು ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 1,29,947ಕ್ಕೆ ತಲುಪಿದೆ.

ಬ್ರೆಜಿಲ್‌ನಲ್ಲಿ 16,03,055 ಮಂದಿಗೆ ಸೋಂಕು ತಗುಲಿದ್ದು, 64,867 ಸೋಂಕಿತರು ಮೃತಪಟ್ಟಿದ್ದಾರೆ. 10,29,045 ಜನರು ಗುಣಮುಖರಾಗಿದ್ದಾರೆ.

ಭಾರತಕ್ಕೆ ಮೂರನೇ ಸ್ಥಾನ
ವಿವಿಯ ಕೊರೊನಾ ಸಂಶೋದನಾ ಕೇಂದ್ರದ ಮಾಹಿತಿ ಪ್ರಕಾರ ಭಾರತದಲ್ಲಿ ಇದುವರೆಗೆ ಒಟ್ಟು 6,97,413 ಜನರಲ್ಲಿ ಕೋವಿಡ್–19 ಸೋಂಕು ಇರುವುದು ಖಚಿತವಾಗಿದೆ. ಹೀಗಾಗಿ ಭಾರತ, ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ದೇಶಗಳ ಸಾಲಿನಲ್ಲಿ ಅಮೆರಿಕ (1) ಮತ್ತು ಬ್ರೆಜಿಲ್ (2)‌ ನಂತರ ಸ್ಥಾನ ಪಡೆದಿದೆ.

ದೇಶದಲ್ಲಿಇದುವರೆಗೆ19,693ಮಂದಿ ಮೃತಪಟ್ಟು4,24,433 ಗುಣಮುಖರಾಗಿದ್ದಾರೆ.2,53,287 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದಂತೆ ರಷ್ಯಾದಲ್ಲಿ 6,80,283 ಜನರಿಗೆ ಸೋಂಕು ತಗುಲಿದೆ. ಪೆರುವಿನಲ್ಲಿ 3,02,718 ಹಾಗೂ ಚಿಲಿಯಲ್ಲಿ 2,95,532 ಹಾಗೂ ಇಂಗ್ಲೆಂಡ್‌ನಲ್ಲಿ 2,86,931 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ.

ಈ ನಾಲ್ಕು ದೇಶಗಳಲ್ಲಿ ಕ್ರಮವಾಗಿ ಕ್ರಮವಾಗಿರಷ್ಯಾದಲ್ಲಿ 10,145,ಪೆರುವಿನಲ್ಲಿ 10,589, ಚಿಲಿಯಲ್ಲಿ 6,308 ಮತ್ತು ಇಂಗ್ಲೆಂಡ್‌ನಲ್ಲಿ 44,305 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT