ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ, ಚೀನಾ ಶಾಂತಿಗೆ ಕ್ರಮ ಕೈಗೊಳ್ಳಲು ಸಿದ್ಧ: ಡೊನಾಲ್ಡ್ ಟ್ರಂಪ್

Last Updated 17 ಜುಲೈ 2020, 4:07 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತ ಮತ್ತು ಚೀನಾ ನಡುವಣ ಶಾಂತಿಗಾಗಿ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲು ಬಯಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.

ಕಳೆದ ಕೆಲವು ವಾರಗಳಿಂದ ಟ್ರಂಪ್ ಆಡಳಿತವು ಚೀನಾ ವಿರುದ್ಧ ಭಾರತಕ್ಕೆ ಬೆಂಬಲ ನೀಡುತ್ತಾ ಬಂದಿದೆ.

ಭಾರತ ಮತ್ತು ಚೀನಾ ಜನರನ್ನು ನಾನು ಪ್ರೀತಿಸುತ್ತೇನೆ. ಅವರ ನಡುವೆ ಶಾಂತಿ ನೆಲೆಸಲು ಏನೆಲ್ಲ ಸಾಧ್ಯವೋ ಅದನ್ನೆಲ್ಲಾ ಮಾಡಲು ಬಯಸುತ್ತೇನೆ ಎಂದು ಟ್ರಂಪ್ ಹೇಳಿರುವುದಾಗಿ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೆಯ್ಲಿ ಮೆಕ್ಎನಾನಿ ಹೇಳಿದ್ದಾರೆ. ಲಡಾಖ್‌ನ ನೈಜ ನಿಯಂತ್ರಣ ರೇಖೆ ಬಳಿ ಇತ್ತೀಚೆಗೆ ಭಾರತ-ಚೀನಾ ಸೇನಾಪಡೆಗಳ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ಇದಕ್ಕೂ ಮುನ್ನ, ಭಾರತವು ನಮ್ಮ ಅತ್ಯುತ್ತಮ ಮಿತ್ರರಾಷ್ಟ್ರ, ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯುತ್ತಮ ಸ್ನೇಹಿತ ಎಂದು ಶ್ವೇತಭವನದ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಬಣ್ಣಿಸಿದ್ದರು. ಭಾರತವು ಅಮೆರಿಕದ ಜೊತೆ ಅತ್ಯುತ್ತಮ ಸಹಭಾಗಿತ್ವ ಹೊಂದಿರುವ ದೇಶ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಬುಧವಾರ ಹೇಳಿದ್ದರು. ದಕ್ಷಿಣ ಚೀನಾ ಸಮುದ್ರ ವಿಚಾರಕ್ಕೆ ಸಂಬಂಧಿಸಿ ಈಚೆಗೆ ಅಮೆರಿಕ ಚೀನಾ ವಿರುದ್ಧ ನೀಡಿದ್ದ ಹೇಳಿಕೆಯನ್ನು ಭಾರತವೂ ಬೆಂಬಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT