ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಅಲಸ್ಕಾ ದ್ವೀಪಗಳಲ್ಲಿ ಪ್ರಬಲ ಭೂಕಂಪ; ಸುನಾಮಿ ಬಗ್ಗೆ ಎಚ್ಚರಿಕೆ

Last Updated 22 ಜುಲೈ 2020, 10:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಲಸ್ಕಾ ಪೆನಿನ್ಸುಲಾ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಮಂಗಳವಾರ ರಾತ್ರಿ 11: 12ಕ್ಕೆ (ಭಾರತೀಯ ಕಾಲಮಾನ) ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪನದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪವು 6 ಮೈಲಿ (9.6 ಕಿಲೋಮೀಟರ್) ಆಳ ಹೊಂದಿದ್ದು, ಅಲಸ್ಕಾದ ಆಗ್ನೇಯ ದಿಕ್ಕಿಗೆ 60 ಮೈಲಿ (96 ಕಿಲೋಮೀಟರ್) ವ್ಯಾಪ್ತಿಯಲ್ಲಿ ಕೇಂದ್ರೀಕೃತವಾಗಿದೆ.

ಭೂಕಂಪದ ತೀವ್ರತೆಯು ಪ್ರಬಲವಾಗಿದ್ದರಿಂದ ದಕ್ಷಿಣ ಅಲಸ್ಕಾ, ಅಲಸ್ಕಾ ಪೆನಿನ್ಸುಲಾ ಮತ್ತು ಅಲ್ಯೂಶಿಯನ್ ದ್ವೀಪಗಳ ಸುತ್ತಲಿನ ಸುಮಾರು 300 ಕಿ.ಮೀ ವಿಸ್ತೀರ್ಣದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಹತ್ತಿರದ ಕೆಲ ಪ್ರದೇಶಗಳಿಗೆ ಸುನಾಮಿ ಬಗ್ಗೆ ಸಲಹೆಯನ್ನೂ ನೀಡಲಾಗಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.

ಅಮೆರಿಕ ಮತ್ತು ಉತ್ತರ ಅಮೆರಿಕದ ಕೆನಡಿಯನ್‌ ಪೆಸಿಫಿಕ್ ತೀರಗಳಿಗೆ ಸುನಾಮಿಯ ಆತಂಕವಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿದೆ.

ಸುನಾಮಿ ಎಚ್ಚರಿಕೆ ನೀಡಿರುವ ಪ್ರದೇಶಗಳಲ್ಲಿನ ಜನರು ಒಳನಾಡು ಅಥವಾ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕೆಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT