ಗುರುವಾರ , ಜೂಲೈ 9, 2020
29 °C

ಗಾಂಜಾ ಸಾಗಣೆ: ಭಾರತೀಯನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಧನ–ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್‍: ಗಾಂಜಾ ಸಾಗಣೆ ಆರೋಪದ ಮೇಲೆ ಭಾರತೀಯನೊಬ್ಬನನ್ನು ಇಲ್ಲಿನ ಅಧಿಕಾರಿಗಳು ಬಂಧಿಸಿದ್ದಾರೆ. ಅಂದಾಜು ₹150 ಕೋಟಿ ಮೌಲ್ಯದ 1000 ಕೆ.ಜಿಯಷ್ಟು ಗಾಂಜಾವನ್ನು ಲಾರಿಯಲ್ಲಿ ಕೆನಡಾದಿಂದ ಅಮೆರಿಕಕ್ಕೆ ಸಾಗಿಸುತ್ತಿದ್ದ ಆರೋಪದಡಿ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

15 ದಿನಗಳಲ್ಲಿ ಅಮೆರಿಕದಲ್ಲಿ ಹೀಗೆ ಬಂಧನಕ್ಕೆ ಒಳಗಾದ ಮೂರನೇ ಭಾರತೀಯ ಈತ. ಈ ಅಪರಾಧಕ್ಕೆ ಕನಿಷ್ಠ 10 ವರ್ಷ ಸೆರೆವಾಸ ಅಥವಾ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಕೆನಡಾದ ಒಂಟಾರಿಯೊದ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿ ಚಾಲನೆ ಮಾಡುತ್ತಿದ್ದ ಪ್ರಬ್ಜೋತ್‌ ನಾಗ್ರಾ (26) ಅಮೆರಿಕವನ್ನು ಪೀಸ್‍ ಬ್ರಿಡ್ಜ್ ಸೇತುವೆ ಮೂಲಕ ಪ್ರವೇಶಿಸಲು ಯತ್ನಿಸಿದ್ದ. ಅದರಲ್ಲಿ ಗಾಂಜಾ ಇದ್ದದ್ದು ಪತ್ತೆಯಾಯಿತು. ಕೂಡಲೇ ಆತನನ್ನು ಮತ್ತು ಲಾರಿಯಲ್ಲಿದ್ದ ಗಾಂಜಾವನ್ನು ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು