ಶನಿವಾರ, ಜೂಲೈ 11, 2020
23 °C

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಇರಾನ್

ಎಪಿ Updated:

ಅಕ್ಷರ ಗಾತ್ರ : | |

ಟೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇತರ ಕೆಲವು ವ್ಯಕ್ತಿಗಳ ಬಂಧನಕ್ಕೆ ಇರಾನ್ ವಾರಂಟ್ ಹೊರಡಿಸಿದ್ದು, ಇಂಟರ್‌ಪೋಲ್ ಸಹಾಯ ಕೋರಿದೆ. ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಕಮಾಂಡರ್ ಖಾಸಿಂ ಸೋಲೆಮನಿ ಹತ್ಯೆ ಮಾಡಿದ್ದ ವಿಚಾರವಾಗಿ ಇರಾನ್ ಈ ಕ್ರಮ ಕೈಗೊಂಡಿದೆ.

ಟ್ರಂಪ್‌ಗೆ ಬಂಧನದ ಭೀತಿ ಇಲ್ಲವಾದರೂ ಇತರ ರಾಷ್ಟ್ರಗಳೊಂದಿಗೆ ಇರಾನ್ ಮಾಡಿಕೊಂಡಿರುವ ಪರಮಾಣು ಒಪ್ಪಂದದಿಂದ ಅಮೆರಿಕ ಏಕಪಕ್ಷೀಯವಾಗಿ ಹಿಂದೆ ಸರಿದ ಬಳಿಕ ಉಭಯ ದೇಶಗಳ ನಡುವಣ ಉದ್ವಿಗ್ನತೆ ಹೆಚ್ಚಾಗಿದೆ.

‘ಜನವರಿ 3ರಂದು ಬಾಗ್ದಾದ್‌ನಲ್ಲಿ ನಡೆದ ಖಾಸಿಂ ಸೋಲೆಮನಿ ಹತ್ಯೆಯಲ್ಲಿ ಟ್ರಂಪ್ ಸೇರಿ 30 ಮಂದಿಯ ಕೈವಾಡವಿರುವುದಾಗಿ ಇರಾನ್ ಆರೋಪಿಸಿದೆ. ಅವರೆಲ್ಲ ಕೊಲೆ ಮತ್ತು ಭಯೋತ್ಪಾದನೆ ಪ್ರಕರಣ ಎದುರಿಸುತ್ತಿದ್ದಾರೆ’ ಎಂದು ಟೆಹ್ರಾನ್‌ನ ಸರ್ಕಾರಿ ವಕೀಲ ಅಲಿ ಅಲ್ಕಾಸಿಮೆಹ್ರ್ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ಕಮಾಂಡರ್ ಹತ್ಯೆಗೆ ಆದೇಶ ನೀಡಿದ್ದು ಡೊನಾಲ್ಡ್ ಟ್ರಂಪ್: ಅಮೆರಿಕ ಸೇನೆ

ಟ್ರಂಪ್‌ ಹೊರತುಪಡಿಸಿ ಇತರ ಆರೋಪಿಗಳ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಆದರೆ, ಟ್ರಂಪ್‌ ವಿರುದ್ಧದ ಕಾನೂನು ಸಮರವನ್ನು ಅವರ ಅಧ್ಯಕ್ಷತೆ ಅವಧಿ ಮುಗಿದ ನಂತರವೂ ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ಫ್ರಾನ್ಸ್‌ನ ಲಿಯಾನ್ ಮೂಲದ ಇಂಟರ್‌ಪೋಲ್ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಯುದ್ಧಭೀತಿ | ಇರಾಕ್‌ ನೆಲದಲ್ಲಿ ಅಮೆರಿಕ ರಾಕೆಟ್ ದಾಳಿ: ಇರಾನ್‌ ಕಮಾಂಡರ್ ನಿಧನ

ಟ್ರಂಪ್‌ ಮತ್ತು ಇತರರ ವಿರುದ್ಧ ‘ರೆಡ್‌ ಕಾರ್ನರ್ ನೋಟಿಸ್’ ಹೊರಡಿಸುವಂತೆಯೂ ಇರಾನ್ ಮನವಿ ಮಾಡಿದೆ ಎಂದು ಅಲಿ ಅಲ್ಕಾಸಿಮೆಹ್ರ್ ಹೇಳಿದ್ದಾರೆ.

ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಇರಾನ್‌ ಸೇನೆಯ ಕಮಾಂಡರ್ ಖಾಸಿಂ ಸೋಲೆಮನಿ ಅವರನ್ನು ಅಮೆರಿಕ ಜನವರಿ 3ರಂದು ಹತ್ಯೆ ಮಾಡಿತ್ತು. ವಿದೇಶಗಳಲ್ಲಿ ಅಮೆರಿಕ ಪ್ರಜೆಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ನಮ್ಮ ಅಧ್ಯಕ್ಷರು ತೆಗೆದುಕೊಂಡ ಸ್ಪಷ್ಟ ನಿರ್ಧಾರದಂತೆ ಕಾರ್ಯಾಚರಣೆ ನಡೆದಿದೆ ಎಂದು ಅಮೆರಿಕ ಸೇನೆ ಬಳಿಕ ಸ್ಪಷ್ಟನೆ ನೀಡಿತ್ತು.

ಇನ್ನಷ್ಟು...

ರಾಯಭಾರ ಕಚೇರಿ ಧ್ವಂಸಕ್ಕೆ ಯತ್ನ: ಇರಾನ್‌ ಭಾರಿ ಬೆಲೆ ತೆರಲಿದೆ ಎಂದ ಟ್ರಂಪ್‌ 

ಇರಾನ್‌ ಮೇಲೆ ದಾಳಿಯಾದರೆ ಯುದ್ಧ: ಇರಾನ್‌ ವಿದೇಶಾಂಗ ಸಚಿವ 

ಅಮೆರಿಕ– ಇರಾನ್‌ ಸಂಘರ್ಷ ತೀವ್ರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು