ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಕೋಟಿ ವಂಚನೆ ಪ್ರಕರಣ: ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್ ದೋಷಿ

Last Updated 28 ಜುಲೈ 2020, 6:23 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಬಹುಕೋಟಿ ಹಣಕಾಸು ವಂಚನೆ ಪ್ರಕರಣದಲ್ಲಿ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್ ರಜಾಕ್ ಅವರು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಐದು ತಿಂಗಳಲ್ಲಿ ಈ ತೀರ್ಪು ಬಂದಿದೆ.ನಜೀಬ್ ಅವರ ಮಲಾಯ ಪಕ್ಷವು ಸರ್ಕಾರದಲ್ಲಿ ಮಹತ್ವದ ಸ್ಥಾನದಲ್ಲಿದೆ. ಭ್ರಷ್ಟಾಚಾರ ಹಗರಣ ಬಯಲಾದ ಕಾರಣ 2018ರಲ್ಲಿ ನಜೀಬ್ ಅವರ ಪಕ್ಷ ಅಧಿಕಾರ ಕಳೆದುಕೊಂಡಿತ್ತು.

‘ಏಳು ಪ್ರಕರಣಗಳಲ್ಲಿ ಆರೋಪಿಯು ದೋಷಿ ಎಂಬುದು ಕಂಡುಬಂದಿದೆ’ ಎಂದು ನ್ಯಾಯಮೂರ್ತಿ ಮೊಹಮದ್ ನಜಲಾನ್ ಘಜಾಲಿ ಅವರು ಪ್ರಕಟಿಸಿದರು. ನಜೀಬ್ ಅವರು ತಮ್ಮ ಸ್ವಂತ ಬಳಕೆಗೆ ಹಣ ಬಳಸಿಕೊಂಡಿದ್ದಾರೆ ಎಂದು ಪ್ರತಿವಾದಿಗಳು ಆರೋಪಿಸಿದ್ದರು. ಇದನ್ನು ಸಮರ್ಥವಾಗಿ ಅಲ್ಲಗಳೆಯಲು ನಜೀಬ್ ವಿಫಲರಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು.

ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಜೀಬ್ ಅವರಿಗೆ ಅವಕಾಶವಿದೆ. ಬ್ಯಾಂಕ್‌ಗಳು ತಮ್ಮನ್ನು ದಾರಿ ತಪ್ಪಿಸಿದ್ದು, ಇದೊಂದು ರಾಜಕೀಯ ಷಡ್ಯಂತ್ರ ಎಂದು ನಜೀಬ್ ಆರೋಪಿಸಿದ್ದರು.

ನಜೀಬ್ ಅವರ ವಿರುದ್ಧ ಐದು ವಿಚಾರಣೆಗಳು ನಡೆಯುತ್ತಿವೆ. ಅವರ ವಿರುದ್ಧ ಒಟ್ಟು 42 ಆರೋಪಗಳನ್ನು ಹೊರಿಸಲಾಗಿದೆ. ಹಲವು ವರ್ಷಗಳ ಕಾಲ ನಜೀಬ್ ಶಿಕ್ಷೆ ಎದುರಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಅಧಿಕಾರ ದುರುಪಯೋಗ, ವಿಶ್ವಾಸದ್ರೋಹದ ಮೂರು ಪ್ರಕರಣ, ಅಕ್ರಮ ಹಣ ವರ್ಗಾವಣೆ ಆರೋಪಗಳು ನಜೀಬ್ ವಿರುದ್ಧ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT