ಭಾನುವಾರ, ಆಗಸ್ಟ್ 1, 2021
27 °C

ಕೋವಿಡ್‌–19 ವಿಶ್ವ ಪಟ್ಟಿಯಲ್ಲಿ ಮೆಕ್ಸಿಕೊಗೆ 3ನೇ ಸ್ಥಾನ

ಎಪಿ Updated:

ಅಕ್ಷರ ಗಾತ್ರ : | |

Prajavani

ಮೆಕ್ಸಿಕೊ ಸಿಟಿ: ಅಮೆರಿಕ, ಬ್ರೆಜಿಲ್‌ ನಂತರ ಮೆಕ್ಸಿಕೊದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು ವಿಶ್ವದ ಕೋವಿಡ್‌ 19 ಪಟ್ಟಿಯಲ್ಲಿ ಈ ರಾಷ್ಟ್ರ 3ನೇ ಸ್ಥಾನದಲ್ಲಿದೆ.

ಇಲ್ಲಿ 24 ಗಂಟೆಗಳ ಅವಧಿಯಲ್ಲಿ 688 ಮಂದಿ ಮೃತರಾಗಿದ್ದು ಒಟ್ಟು ಸಾವಿನ ಸಂಖ್ಯೆ 46,688ಕ್ಕೆ ಏರಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಅಂಕಿ ಅಂಶಗಳ ಪ್ರಕಾರ ಕೋವಿಡ್‌ 19ನಿಂದಾಗಿ ಬ್ರಿಟನ್‌ನಲ್ಲಿ 46,119 ಮಂದಿ ಸಾವಿಗೀಡಾಗಿದ್ದಾರೆ. ಮೆಕ್ಸಿಕೊದಲ್ಲಿ ಸಾವಿನ ಸಂಖ್ಯೆ ಇದಕ್ಕೂ ಹೆಚ್ಚು ಇರುವ ಕಾರಣ ಈ ರಾಷ್ಟ್ರ 3ನೇ ಸ್ಥಾನಕ್ಕೇರಿದೆ.

 ಈ ರಾಷ್ಟ್ರದಲ್ಲಿ ಈಗ 4,24,000ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು