ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಭೂ ಪ್ರದೇಶಗಳನ್ನು ಒಳಗೊಂಡ ಪರಿಷ್ಕೃತ ನಕ್ಷೆ ಕಳುಹಿಸಲು ನೇಪಾಳ ಸಿದ್ಧತೆ

Last Updated 2 ಆಗಸ್ಟ್ 2020, 8:53 IST
ಅಕ್ಷರ ಗಾತ್ರ
ADVERTISEMENT
""

ಕಠ್ಮಂಡು:ಭಾರತದ ಕೆಲವು ಪ್ರದೇಶಗಳನ್ನು ಒಳಗೊಂಡ ತನ್ನ ಪರಿಷ್ಕೃತ ನಕ್ಷೆಯನ್ನು ನೇಪಾಳವು ಆಗಸ್ಟ್‌ ಮಧ್ಯದಲ್ಲಿ ಭಾರತ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸಲು ಉದ್ದೇಶಿಸಿದೆ ಎಂದು ಅಲ್ಲಿನ ಸಚಿವರೊಬ್ಬರು ತಿಳಿಸಿದ್ದಾರೆ.ಭಾರತದ ಲಿಪುಲೇಖ್‌, ಕಾಲಾಪಾನಿ ಮತ್ತು ಲಿಂಪಿಯಾಧೂರಾ ಪ್ರದೇಶಗಳು ಪರಿಷ್ಕೃತ ನಕ್ಷೆಯಲ್ಲಿ ಸೇರಿರಲಿವೆ ಎಂದೂ ಹೇಳಿದ್ದಾರೆ.

‘ಲಿಪುಲೇಖ್‌, ಕಾಲಾಪಾನಿ ಮತ್ತು ಲಿಂಪಿಯಾಧೂರಾ ಪ್ರದೇಶಗಳನ್ನು ಒಳಗೊಂಡ ಪರಿಷ್ಕೃತ ನಕ್ಷೆಯನ್ನು ವಿಶ್ವಸಂಸ್ಥೆಯ ವಿವಿಧ ಅಂಗಸಂಸ್ಥೆಗಳು, ಭಾರತ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸುತ್ತೇವೆ. ಈ ತಿಂಗಳ ಮಧ್ಯದ ವೇಳೆಗೆಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಭೂ ನಿರ್ವಹಣೆ, ಸಹಕಾರ ಮತ್ತು ಬಡತನ ನಿವಾರಣಾ ಇಲಾಖೆ ಸಚಿವೆ ಪದ್ಮಾ ಆರ್ಯಲ್‌ ಹೇಳಿದ್ದಾರೆ.

ನೇಪಾಳದ ಪರಿಷ್ಕೃತ ನಕ್ಷೆಯ 4,000 ಪ್ರತಿಗಳನ್ನು ಇಂಗ್ಲಿಷ್‌ನಲ್ಲಿ ಮುದ್ರಿಸಿ ಅಂತರರಾಷ್ಟ್ರೀಯ ಸುಮದಾಯಕ್ಕೆ ಕಳುಹಿಸುವಂತೆ ಮಾಪನ ಇಲಾಖೆಗೆ ಸೂಚಿಸಲಾಗಿದೆ.

ಮಾಪನ ಇಲಾಖೆಯು ಪರೀಷ್ಕೃತ ನಕ್ಷೆಯ 25 ಸಾವಿರ ಪ್ರತಿಗಳನ್ನು ಮುದ್ರಿಸಿ ದೇಶದಾದ್ಯಂತ ವಿತರಿಸಿದೆ. ಪ್ರಾಂತೀಯ ಮತ್ತು ಸರ್ಕಾರಿ ಕಚೇರಿಗಳಿಗೆ ನಕ್ಷೆ ಪ್ರತಿಗಳನ್ನು ಉಚಿತವಾಗಿ ನೀಡಲಾಗುವುದು. ಜನರು 50 ರೂಪಾಯಿಗೆ ಖರೀದಿಸಬಹುದಾಗಿದೆ.

ನೇಪಾಳ ಸರ್ಕಾರವು ಪರಿಷ್ಕೃತ ನಕ್ಷೆಯನ್ನು ಮೇ 20ರಂದು ಬಿಡುಗಡೆ ಮಾಡಿತ್ತು.

ನೇಪಾಳದ ಏಕಪಕ್ಷೀಯ ಕ್ರಮವು ‘ಐತಿಹಾಸಿಕ ಪುರಾವೆ ಮತ್ತು ಆಧಾರಗಳನ್ನು ಆಧರಿಸಿದ್ದಲ್ಲ’ ಎಂದು ಭಾರತ ಪ್ರತಿಕ್ರಿಯಿಸಿದೆ. ಮುಂದುವರಿದು,ಈ ಕ್ರಮವು ಬಾಕಿ ಇರುವ ಗಡಿ ಸಮಸ್ಯೆಗಳನ್ನು ರಾಜತಾಂತ್ರಿಕ ಸಂವಾದದ ಮೂಲಕ ಪರಿಹರಿಸಿಕೊಳ್ಳುವದ್ವಿಪಕ್ಷೀಯ ಸಂಬಂಧಕ್ಕೆ ವಿರುದ್ಧವಾಗಿದೆ. ಮತ್ತು ‘ಪ್ರಾದೇಶಿಕ ಹಕ್ಕುಗಳನ್ನು ತಂತಾನೆ ವಿಸ್ತರಿಸಿಕೊಳ್ಳುವುದಕ್ಕೆ ಭಾರತ ಅವಕಾಶ ನೀಡುವುದಿಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT