ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ವೈರಸ್‌ ದೇಶ ಪ್ರವೇಶಿಸಿದೆ: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್‌ ಉನ್

ಮೊದಲ ಸೊಂಕು ಪ್ರಕರಣದ ಶಂಕೆ; ಗಡಿಯಲ್ಲಿ ಲಾಕ್‌ಡೌನ್ ಜಾರಿ
Last Updated 26 ಜುಲೈ 2020, 3:41 IST
ಅಕ್ಷರ ಗಾತ್ರ

ಸಿಯೊಲ್:ವ್ಯಕ್ತಿಯೊಬ್ಬ ದಕ್ಷಿಣ ಕೊರಿಯಾದಿಂದಅಕ್ರಮವಾಗಿಗಡಿ ನುಸುಳಿದ್ದು, ಆತನಿಗೆ ಕೋವಿಡ್–19 ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಆ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್‌ ಉನ್‌ ಅವರು ಗಡಿ ನಗರ ಕೈಸೊಂಗ್‌ನಲ್ಲಿ ಲಾಕ್‌ಡೌನ್‌ ಜಾರಿಗೆ ಆದೇಶಿಸಿದ್ದಾರೆ.

ಒಂದುವೇಳೆ ಆ ವ್ಯಕ್ತಿಗೆ ಸೋಂಕು ತಗುಲಿರುವುದು ಖಚಿತವಾದರೆ, ಉತ್ತರ ಕೊರಿಯಾದಲ್ಲಿ ದೃಢಪಟ್ಟ ಮೊದಲ ಕೋವಿಡ್–19 ಪ್ರಕರಣವಾಗಲಿದೆ. ಇದುವರೆಗೆ ದೇಶದಲ್ಲಿ ಒಂದೂ ಪ್ರಕರಣಗಳು ವರದಿಯಾಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಸೋಂಕು ಶಂಕಿತನ ಮಾಹಿತಿ ದೊರೆತ ಬಳಿಕ ಕೂಡಲೇಸಚಿವ ಸಂಪುಟಸಭೆ ಕರೆದಿದಿರುವ ಕಿಮ್‌,ಕೈಸೊಂಗ್‌‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಲಾಕ್‌ಡೌನ್‌ ಜಾರಿಗೆ ಆದೇಶಿಸಿದ್ದಾರೆ. ‘ಕೆಟ್ಟ ವೈರಸ್‌ ದೇಶಕ್ಕೆ ಪ್ರವೇಶಿಸಿದೆ ಎಂದು ಹೇಳಬಹುದಾದ ನಿರ್ಣಾಯಕ ಪರಿಸ್ಥಿತಿ ಇದಾಗಿದೆ’ ಎಂದು ಕಿಮ್‌ ಹೇಳಿರುವುದಾಗಿ ಕೊರಿಯಾ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿದೆ.

‘ಮೂರು ವರ್ಷಗಳ ಹಿಂದೆ ದಕ್ಷಿಣ ಕೊರಿಯಾಗೆ ಓಡಿಹೋಗಿದ್ದ ಹಾಗೂ ಕೆಟ್ಟ ವೈರಸ್‌ ಸೋಂಕಿಗೆ ಒಳಗಾಗಿದ್ದಾನೆ ಎಂದು ಶಂಕಿಸಲಾಗಿರುವ ವ್ಯಕ್ತಿಯು ಜುಲೈ 19ರಂದು ಗಡಿರೇಖೆಯನ್ನುಅಕ್ರಮವಾಗಿ ದಾಟಿ ಹಿಂದಿರುಗಿದ್ದಾನೆ’ ಎಂದುಕೆಸಿಎನ್‌ಎ ವರದಿ ಮಾಡಿದೆ.ಆದರೆ, ಆತನಿಗೆ ಕೋವಿಡ್–19 ಪರೀಕ್ಷೆ ಮಾಡಲಾಗಿದೆಯೇ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಬದಲಾಗಿ, ಆತನ ತಪಾಸಣೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಇದೀಗ ವ್ಯಕ್ತಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದು, ಆತನ ಸಂಪರ್ಕಗಳ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಶಂಕಿತ ವ್ಯಕ್ತಿಯು ನುಸುಳಿದ್ದಾನೆ ಎನ್ನಲಾದ ಗಡಿ ಪ್ರದೇಶದಲ್ಲಿ ನಿಯೋಜನೆಯಾಗಿರುವ ಮಿಲಿಟರಿ ಘಟಕಗಳ ಕಾರ್ಯಾಚರಣೆ ಕುರಿತು ತನಿಖೆಗೆಕಿಮ್‌ ಆದೇಶಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಕಠಿಣ ಶಿಕ್ಷೆ ವಿಧಿಸುವಂತೆ ಸೂಚಿಸಿದ್ದಾರೆ.

ರಷ್ಯಾ ಮತ್ತು ಬೇರೆ ದೇಶಗಳಿಂದ ಉತ್ತರ ಕೊರಿಯಾ ಸಾವಿರಾರು ಪರಿಕ್ಷಾ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗಿದ್ದು,ಗಡಿ ಸಂಚಾರವನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT