ಗುರುವಾರ , ಆಗಸ್ಟ್ 5, 2021
23 °C

ಪಾಕಿಸ್ತಾನದಲ್ಲಿ ಆನ್‌ಲೈನ್‌ ಗೇಮ್‌ 'ಪಬ್‌ಜಿ' ನಿರ್ಬಂಧ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಪಬ್‌ಜಿ ಗೇಮ್‌–ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಜಾಗತಿಕ ಇಸ್ಪೋರ್ಟ್ಸ್‌ ಸ್ಪರ್ಧೆಗಳ ಜನಪ್ರಿಯ ಆನ್‌ಲೈನ್‌ ಗೇಮ್‌ಗಳಲ್ಲಿ ಪ್ಲೈಯರ್‌ಅನ್‌ನೌನ್ಸ್‌ ಬ್ಯಾಟಲ್‌ಗ್ರೌಂಡ್ಸ್‌ (ಪಬ್‌ಜಿ / PUBG)ಸಹ ಒಂದು. ಮಕ್ಕಳು, ಹದಿಹರೆದವರು ಹಾಗೂ ಯುವಜನತೆ ಪಬ್‌ಜಿ ಲೋಕದಲ್ಲಿ ಮುಳುಗಿರುವ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಇದೀಗ ಪಾಕಿಸ್ತಾನ ಪಬ್‌ಜಿ ಆನ್‌ಲೈನ್‌ ಗೇಮ್‌ ನಿರ್ಬಂಧಿಸಿದೆ.

ಒಬ್ಬರಿಗಿಂತ ಹೆಚ್ಚು ಜನ ಆನ್‌ಲೈನ್‌ನಲ್ಲಿ ಸಂಪರ್ಕ ಸಾಧಿಸಿ ತಂಡವಾಗಿ ಸೇರಿಕೊಂಡು ಪಬ್‌ಜಿ ಶೂಟಿಂಗ್‌ ಗೇಮ್‌ ಆಡಬಹುದಾಗಿದೆ. ಈ ಗೇಮ್‌ ಆಡುವ ಚಟಕ್ಕೆ ಬೀಳುವ ಮಕ್ಕಳ ಮನಸ್ಸಿನಲ್ಲಿ ದ್ವೇಷ, ಕ್ರೌರ್ಯ ಹಾಗೂ ಖಿನ್ನತೆ ಉಂಟಾಗುತ್ತಿರುವುದಾಗಿ ಹಲವು ದೂರುಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪಬ್‌ಜಿ ನಿರ್ಬಂಧಿಸಲಾಗಿದೆ.

ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕವಾಗಿ ನಕಾರಾತ್ಮಕ ಪರಿಣಾಮ ಬೀರುತ್ತಿರುವುದಾಗಿ ಅನೇಕ ದೂರುಗಳು ದಾಖಲಾಗಿವೆ. ಗೇಮ್‌ ಆಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವರದಿಯಾಗಿದ್ದು, ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ಪಬ್‌ಜಿಗೆ ಅಂತರ್ಜಾಲ ಸಂಪರ್ಕ ಸಿಗದಂತೆ ಕ್ರಮಕೈಗೊಂಡಿದೆ.

ಪಬ್‌ಜಿ ನಿಷೇಧಿಸುವ ಕುರಿತು ಹೈಕೋರ್ಟ್‌ನಲ್ಲಿ ಜುಲೈ 9ರಂದು ವಿಚಾರಣೆ ನಿಗದಿಯಾಗಿದೆ.  ಗೇಮ್‌ನಲ್ಲಿ ನೀಡಲಾಗುವ ಟಾಸ್ಕ್ ಅಥವಾ ಮಿಷನ್‌ ಪೂರ್ಣಗೊಳಿಸಿ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಮಾರಕವಾಗುತ್ತಿರುವ ಈ ಗೇಮ್‌ ನಿಷೇಧಿಸುವಂತೆ ಪೊಲೀಸರು ಒತ್ತಾಯಿಸಿರುವುದಾಗಿ ಈ ಹಿಂದೆ ಡಾನ್‌ ಪತ್ರಿಕೆ ವರದಿ ಮಾಡಿತ್ತು.

ಇದನ್ನೂ ಓದಿ: ಇ–ಗೇಮ್ ಗೀಳು: ಇದು ವಿಡಿಯೊ ಗೇಮ್ ಜಗತ್ತಿನ ಕರಾಳ ಮುಖ

ಕೊರಿಯಾ, ಭಾರತ, ಚೀನಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪಬ್‌ಜಿ ಟೂರ್ನಿಗಳು ನಡೆಯುತ್ತವೆ. ಇದಕ್ಕಾಗಿಯೇ ನಿತ್ಯ 12–15 ತಾಸು ಅಭ್ಯಾಸ ನಡೆಸುವ ತಂಡಗಳೂ ಇವೆ. ಇಂಥದ್ದೇ ಗೇಮ್‌ಗಳನ್ನು ವೃತ್ತಿ ಪರವಾಗಿಸುವ ನಿಟ್ಟಿನಲ್ಲಿ ಇಸ್ಪೋರ್ಟ್ಸ್ ಸ್ಪರ್ಧೆಗಳು ನಡೆಯುತ್ತಿವೆ.

ಈಗಾಗಲೇ ಜೋರ್ಡನ್, ಇರಾಕ್‌, ನೇಪಾಳ, ಇಂಡೊನೇಷ್ಯಾದ ಕೆಲವು ಪ್ರಾಂತ್ಯ ಹಾಗೂ ಭಾರತದ ಗುಜರಾತ್‌ನಲ್ಲಿ ಪಬ್‌ಜಿ ನಿಷೇಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು