ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಮೂಲದವರು ಮುಖ್ಯಸ್ಥರಾಗಿರುವ ಉಗ್ರ ಸಂಘಟನೆ ಕಪ್ಪುಪಟ್ಟಿಗೆ ಸೇರಿಸಿಲ್ಲ

ವಿಶ್ವಸಂಸ್ಥೆ ವರದಿ
Last Updated 26 ಜುಲೈ 2020, 7:43 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದವವರು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಉಗ್ರ ಸಂಘಟನೆಗಳು ಈಗಲೂ ಸಕ್ರಿಯವಾಗಿವೆ. ಈ ಸಂಘಟನೆಗಳನ್ನು ಇದುವರೆಗೆ ಕಪ್ಪುಪಟ್ಟಿಗೆ ಸೇರಿಸಿಲ್ಲ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಸಕ್ರಿಯವಾಗಿರುವ ಅಲ್‌ಖೈದಾ ಗುಂಪು, ಇರಾಕ್‌ ಮತ್ತು ಲೆವಂಟ್‌–ಖೋರಾಸನ್‌ನಲ್ಲಿನ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌ಐಎಲ್–ಕೆ‌), ತೆಹ್ರೀಕ್‌–ಎ–ತಾಲಿಬಾನ್‌ (ಪಾಕಿಸ್ತಾನ– ಟಿಟಿಪಿ) ಸೇರಿದಂತೆ ಹಲವಾರು ಸಂಘಟನೆಗಳನ್ನು ಪಾಕಿಸ್ತಾನ ಮೂಲದವರೇ ಮುನ್ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಫ್ಗಾನಿಸ್ತಾನದ ವಿಶೇಷ ಭದ್ರತಾಪಡೆಗಳು ಕಳೆದ ಏಪ್ರಿಲ್‌ನಲ್ಲಿ ದೇಶದಾದ್ಯಂತ ಕಾರ್ಯಾಚರಣೆ ನಡೆಸಿದ್ದವು. ಐಎಸ್‌ಐಎಲ್‌–ಕೆ ಸಂಘಟನೆಯ ಮುಖ್ಯಸ್ಥ ಅಸ್ಲಾಂ ಫಾರೂಕಿ (ಅಬ್ದುಲ್ಲಾ ಒರೋಕ್‌ಝೈ ಎಂದೂ ಹೆಸರು) ಮತ್ತು ಆತನ ಉತ್ತರಾಧಿಕಾರಿ ಜಿಯಾ ಉಲ್‌–ಹಕ್‌ನನ್ನು ಈ ಸಂದರ್ಭದಲ್ಲಿ ಬಂಧಿಸಿದ್ದವು.

ಫಾರೂಕಿಯ ಮೂಲ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯ. ಕಳೆದ ಮಾರ್ಚ್‌ನಲ್ಲಿ ಕಾಬೂಲ್‌ನ ಗುರುದ್ವಾರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರಿ ಈತ. ಈ ದಾಳಿಯಲ್ಲಿ 25ಕ್ಕೂ ಹೆಚ್ಚು ಜನ ಸಿಖ್ಖರು ಮೃತಪಟ್ಟಿದ್ದರು. ಈತನ ಉತ್ತರಾಧಿಕಾರಿ ಹಕ್‌ ಸಹ ಪಾಕಿಸ್ತಾನದ ನಾಗರಿಕ. ಈ ಇಬ್ಬರನ್ನು ಕಪ್ಪುಪಟ್ಟಿಗೆ ಸೇರಿಸಿಲ್ಲ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT