ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವಿನಂಚಿನ ಕಪ್ಪೆ ಸಂತತಿ ಪತ್ತೆ

Last Updated 24 ಜುಲೈ 2020, 8:10 IST
ಅಕ್ಷರ ಗಾತ್ರ

ಫ್ಲಾಗ್‌ಸ್ಟಾಫ್‌ (ಅಮೆರಿಕ): ಅವಸಾನದ ಅಂಚಿನಲ್ಲಿರುವ ಅಪರೂಪದ ‘ಚಿರಿಕಾಹುವ’ ಸಂತತಿಯ ಕಪ್ಪೆಗಳನ್ನು (ಚಿರಿಕಾಹುವ ಲೆಪರ್ಡ್‌ ಫ್ರಾಗ್‌) ಇಲ್ಲಿನ ಅರಣ್ಯ ಸೇವಾ ಸ್ವಯಂಸೇವಕರು ಈಚೆಗೆ ಪತ್ತೆ ಮಾಡಿದ್ದಾರೆ.

ಮಧ್ಯ ಅರಿಜೋನಾದ ಕೆರೆಯೊಂದರಲ್ಲಿ ಈ ತಳಿಯ ಹತ್ತು ಕಪ್ಪೆಗಳು ಇರುವುದನ್ನು ಅವರು ಖಚಿತಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಿಂದೆ, ಬಹುತೇಕ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತಿದ್ದ ಈ ಜಲವಾಸಿ ಕಪ್ಪೆಗಳು ಕಾಲಕ್ರಮೇಣ ಅವಸಾನ ಹೊಂದುತ್ತಾ ಪೂರ್ವ ಅರಿಜೋನಾ, ಪಶ್ಚಿಮ ಮತ್ತು ಉತ್ತರ ಮೆಕ್ಸಿಕೊಗೆ ಸೀಮಿತಗೊಂಡಿದ್ದವು. ಕ್ರಮೇಣ ಅವುಗಳ ವಾಸಸ್ಥಾನ ನಾಶವಾದದ್ದು, ಕಪ್ಪೆ ಭಕ್ಷಕ ಪ್ರಾಣಿಗಳ ಸಂಖ್ಯೆ ಹೆಚ್ಚಿದ್ದು, ರೋಗ ಮುಂತಾದ ಕಾರಣಗಳಿಂದ ಈ ಕಪ್ಪೆಗಳ ಸಂತತಿ ಅವಸಾನದ ಅಂಚಿಗೆ ಬಂದಿತ್ತು. ಇವು ಅಳಿವಿನಂಚಿನಲ್ಲಿರುವ ಜೀವ ಪ್ರಭೇದಗಳು ಎಂದು ಅಮೆರಿಕದ ಮೀನು ಹಾಗೂ ವನ್ಯಪ್ರಾಣಿಗಳ ವಿಭಾಗವು 2002ರಲ್ಲಿ ಘೋಷಿಸಿತ್ತು. ಕಪ್ಪೆಗಳನ್ನು ಹಿಡಿದು, ಕೆರೆಗಳಲ್ಲಿ ಸಂರಕ್ಷಣೆ ಮಾಡುವ ಯೋಜನೆಯನ್ನೂ ವಿಭಾಗವು ರೂಪಿಸಿತ್ತು.

ಈ ಕಪ್ಪೆಗಳ ಸಂತತಿ ಸಂರಕ್ಷಣೆಗಾಗಿ ಬರಗಾಲದಲ್ಲೂ ಕೆರೆಯಲ್ಲಿ ನೀರು ತುಂಬಿಸಲಾಗುತ್ತಿದೆ. ಇತರ ಪ್ರಾಣಿಗಳು ಆ ಕೆರೆ ಪ್ರವೇಶಿಸುವುದನ್ನು ತಡೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT