ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಔಷಧಗಳಿಂದ ಕೊರೊನಾ ವೈರಸ್‌ ಬೆಳವಣಿಗೆಗೆ ತಡೆ

ಪ್ರಯೋಗಾಲಯ ನೆರವಿನ ಅಧ್ಯಯನ ಉಲ್ಲೇಖಿಸಿ ವಿಜ್ಞಾನಿಗಳ ಹೇಳಿಕೆ
Last Updated 25 ಜುಲೈ 2020, 13:48 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌:ಈಗ ಬಳಕೆಯಲ್ಲಿರುವ ಪೈಕಿ 21 ಔಷಧಗಳು, ಸೋಂಕಿತರ ದೇಹದಲ್ಲಿ ಕೊರೊನಾ ವೈರಸ್‌ ಸಂಖ್ಯೆ ಹೆಚ್ಚಳವಾಗುವುದನ್ನು ತಡೆಗಟ್ಟಬಲ್ಲವು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೊರೊನಾ ಸೋಂಕಿನ ಚಿಕಿತ್ಸೆಗೆ ಸದ್ಯ ಬಳಸುತ್ತಿರುವ ರೆಮ್‌ಡೆಸಿವಿರ್‌ನೊಂದಿಗೆ, ಈ 21ರ ಪೈಕಿ ಯಾವುದಾದರೂ ನಾಲ್ಕು ಔಷಧಗಳನ್ನು ನೀಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೋವಿಡ್‌–19 ವಿರುದ್ಧ ಪರಿಣಾಮಕಾರಿ ಔಷಧ ಕಂಡು ಹಿಡಿಯಲು ಈ ಅಧ್ಯಯನ ನೆರವಾಗಲಿದೆ ಎಂದು ವಿಶ್ವದ ವೈದ್ಯಕೀಯ ಸಮುದಾಯ ಆಶಾಭಾವ ವ್ಯಕ್ತಪಡಿಸಿದೆ.

ಭಾರತ ಮೂಲದವರು ಸೇರಿದಂತೆ ಹಲವು ವಿಜ್ಞಾನಿಗಳು ಈ ಸಂಬಂಧ ಸಂಶೋಧನೆ ಕೈಗೊಂಡಿದ್ದಾರೆ. ಅಮೆರಿಕದ ಸ್ಯಾನ್‌ಫೋರ್ಡ್‌ ಬರ್ನ್‌ಹಾಮ್‌ ಪ್ರಿಬಿಸ್‌ ಮೆಡಿಕಲ್‌ ಡಿಸ್ಕವರಿ ಇನ್‌ಟಿಟ್ಯೂಟ್‌ನ ಸಂಶೋಧಕರು ನಡೆಸಿರುವ ಅಧ್ಯಯನದ ವಿವರಗಳು ‘ನೇಚರ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿವೆ.

‘ರೋಗಿಗಳು ಗುಣಮುಖರಾಗಲು ಬೇಕಾಗುವ ಅವಧಿಯನ್ನುರೆಮ್‌ಡೆಸಿವಿರ್‌ ಕಡಿಮೆ ಮಾಡಲಿದೆ ಎಂಬುದು ಸಿದ್ಧವಾಗಿದೆ. ಆದರೆ, ಈ ಔಷಧ ಎಲ್ಲರಿಗೂ ಪರಿಣಾಮಕಾರಿ ಎನಿಸಿಲ್ಲ’ ಎಂದು ಇನ್‌ಟಿಟ್ಯೂಟ್‌ನ ಇಮ್ಯುನಿಟಿ ಆ್ಯಂಡ್‌ ಪ್ಯಾಥೋಜಿನೆಸಿಸ್‌ ಕಾರ್ಯಕ್ರಮದ ನಿರ್ದೇಶಕ ಸುಮಿತ್‌ ಚಂದಾ ಹೇಳುತ್ತಾರೆ.

‘ಕೈಗೆಟಕುವ ದರದಲ್ಲಿ ಸಿಗುವ, ಪರಿಣಾಮಕಾರಿಯಾದ ಮತ್ತು ಕೂಡಲೇ ಲಭ್ಯ ಇರುವಂತಹ ಔಷಧ ಈಗಿನ ತುರ್ತು’ ಎಂದೂ ಅವರು ಹೇಳುತ್ತಾರೆ.

ಈ 21 ಔಷಧಗಳ ಪೈಕಿ ‘ಆಸ್ಟೆಮಿಜೋಲ್‌’ (ಅಲರ್ಜಿ ಇದ್ದಾಗ ಬಳಸುವ ಔಷಧ) ಹಾಗೂ ‘ಕ್ಲೋಫಾಜಮೈನ್‌’ (ಕುಷ್ಠರೋಗ ಚಿಕಿತ್ಸೆಯಲ್ಲಿ ಬಳಕೆ) ಅನ್ನು ರೆಮ್‌ಡೆಸಿವಿರ್‌ ಜೊತೆ ತುರ್ತು ಸಂದರ್ಭದಲ್ಲಿ ಕೋವಿಡ್‌ ರೋಗಿಗಳಿಗೆ ನೀಡಲು ಅಮೆರಿಕದ ಎಫ್‌ಡಿಎ ಈಗಾಗಲೇ ಅನುಮೋದನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT