ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ; ಬಡವರಿಗೆ ಭತ್ಯೆ ಮೀಸಲಿಟ್ಟ ಭಾರತ ಮೂಲದ ಸಂಸದ

ಸಂಸತ್ತಿನ ವಿರೋಧ ಪಕ್ಷದ ನಾಯಕ
Last Updated 29 ಜುಲೈ 2020, 13:59 IST
ಅಕ್ಷರ ಗಾತ್ರ

ಸಿಂಗಪುರ: ಸಿಂಗಪುರ ಸಂಸತ್ತಿನ ಮೊದಲ ವಿರೋಧಪಕ್ಷದ ನಿಯೋಜಿತ ನಾಯಕ ಭಾರತ ಮೂಲದ ಪ್ರೀತಮ್ ಸಿಂಗ್, ತನ್ನ ಭತ್ಯೆಯ ಅರ್ಧದಷ್ಟನ್ನು ತಮ್ಮ ಕ್ಷೇತ್ರದಲ್ಲಿರುವ ಬಡ ನಿವಾಸಿಗಳ ಕಲ್ಯಾಣಕ್ಕಾಗಿ ಮೀಸಲಿಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇತ್ತೀಚೆಗೆ ನಡೆದ ಸಿಂಗಪುರ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರೀತಮ್‌ ಸಿಂಗ್‌ ನೇತೃತ್ವದ ವರ್ಕರ್ಸ್‌ ಪಾರ್ಟಿ ಹತ್ತು ಸ್ಥಾನಗಳನ್ನು ಪಡೆಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚುನಾವಣೆಯಲ್ಲಿ ಇಷ್ಟು ಸೀಟುಗಳನ್ನು ಗೆಲ್ಲಿಸಿದ, ಇವರನ್ನು ಸಂಸತ್ತಿನ ವಿರೋಧಪಕ್ಷದ ನಾಯಕರನ್ನಾಗಿ ನಿಯೋಜನೆ ಮಾಡಲಾಯಿತು.ಸಿಂಗಪುರದ ಸಂಸದೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೀಗೆ ವಿರೋಧ ಪಕ್ಷದ ನಾಯಕನನ್ನು ನಿಯೋಜನೆ ಮಾಡಲಾಗಿದೆ.

ವಿರೋಧ ಪಕ್ಷದ ನಾಯಕರಾಗಿರುವ 44 ವರ್ಷದ ಸಂಸದ ಪ್ರೀತಮ್ ಅವರಿಗೆ ಸಂಸದೀಯ ಪ್ರಾಧಿಕಾರ ದುಪ್ಪಟ್ಟು ಭತ್ಯೆಗಳ ಜತೆಗೆ, ಹಲವು ಸೌಲಭ್ಯಗಳನ್ನು ನೀಡುವುದಾಗಿ ಪ್ರಕಟಿಸಿತು.ಈ ಹಿನ್ನೆಲೆಯಲ್ಲಿ ಪ್ರೀತಮ್ ಅವರು ತಮ್ಮ ಪತ್ನಿಯೊಂದಿಗೆ ಚರ್ಚಿಸಿ, ಇಬ್ಬರೂ ತೀರ್ಮಾನಕ್ಕೆ ಬಂದು, ತನಗೆ ಬರುವ ಭತ್ಯೆಯಲ್ಲಿ ಅರ್ಧದಷ್ಟನ್ನು ತನ್ನ ಕ್ಷೇತ್ರದ ಬಡ ನಿವಾಸಿಗಳ ಕ್ಷೇಮಾಭಿವೃದ್ಧಿಗಾಗಿ ಮೀಸಲಿಡಲು ತೀರ್ಮಾನಿಸಿದ್ದಾರೆ. ಸಿಂಗಪುರ ಸಂಸತ್ತಿನ ವಿರೋಧಪಕ್ಷದ ನಾಯಕನಿಗೆ ವಾರ್ಷಿಕ 3.85 ಲಕ್ಷ ಸಿಂಗಪುರ್ ಡಾಲರ್‌(₹2.10 ಕೋಟಿ‌) ಭತ್ಯೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT