ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಗ್ಡು: ಕಾನ್ಸುಲೇಟ್‌ ಕಚೇರಿ ತೊರೆದ ಅಮೆರಿಕ ಸಿಬ್ಬಂದಿ

Last Updated 26 ಜುಲೈ 2020, 12:19 IST
ಅಕ್ಷರ ಗಾತ್ರ

ಚೆಂಗ್ಡು: ಚೀನಾದ ಚೆಂಗ್ಡು ನಗರದಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಯನ್ನು ಸೋಮವಾರ (ಜುಲೈ27) ಬೆಳಿಗ್ಗೆ ಅಧಿಕೃತವಾಗಿ ಬಂದ್‌ ಮಾಡಲು ಗಡುವು ನೀಡಲಾಗಿದ್ದು, ಭಾನುವಾರ ಬಿಗಿ ಭದ್ರತೆಯಲ್ಲಿ ಸಿಬ್ಬಂದಿ ಹೊರಬಂದರು.

ಕಾನ್ಸುಲೇಟ್‌ ಕಚೇರಿ ಬಳಿ ನೂರಾರು ಜನರು ಸೇರಿದ್ದರು. ಹಸಿರಿನಿಂದ ತುಂಬಿರುವ ಈ ಸ್ಥಳಭಾನುವಾರಮಿನಿ ಪ್ರವಾಸಿ ತಾಣದಂತೆ ಭಾಸವಾಗುತ್ತಿತ್ತು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಪೊಲೀಸ್‌ ವಾಹನಗಳನ್ನು ಹೊರತುಪಡಿಸಿ, ರಸ್ತೆ ಸಂಚಾರನ್ನು ಬಂದ್‌ ಮಾಡಲಾಗಿತ್ತು.

ಅಮೆರಿಕದ ಹ್ಯೂಸ್ಟನ್‌ ನಗರದಲ್ಲಿದ್ದ ಚೀನಾದ ಕಾನ್ಸುಲೇಟ್ ಕಚೇರಿಯನ್ನು ಮುಚ್ಚಿಸಿದ ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಚೀನಾ ಈ ಕ್ರಮ ಕೈಗೊಂಡಿದೆ. ಉಭಯ ದೇಶಗಳ ಈ ಕ್ರಮ ದ್ವಿಪಕ್ಷೀಯ ಸಂಬಂಧದ ಮೇಲೆ ಅಪಾರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT