ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್‌ನ ಯುದ್ಧ ಪೀಡಿತ ಡಾರ್‌ಫರ್‌ನಲ್ಲಿ ಸಂಘರ್ಷ: 60 ಮಂದಿ ಸಾವು

Last Updated 27 ಜುಲೈ 2020, 6:19 IST
ಅಕ್ಷರ ಗಾತ್ರ

ಕೈರೊ: ಸುಡಾನ್‌ನ ಯುದ್ಧ ಪೀಡಿತ ಡಾರ್‌ಫರ್‌ ಪ್ರಾಂತ್ಯದಲ್ಲಿ ನಡೆದ ಸಂಘರ್ಷದಲ್ಲಿ ಸುಮಾರು 60 ಮಂದಿ ಮೃತಪಟ್ಟಿರುವುದಾಗಿ ವಿಶ್ವಸಂಸ್ಥೆ ತಿಳಿಸಿದೆ.

ದಕ್ಷಿಣ ಜಿನೇನದಿಂದ 48 ಕಿ.ಮೀ ದೂರದಲ್ಲಿರುವ ಮಸ್ಟೆರಿ ಹಳ್ಳಿಯ ಮೇಲೆ 500 ಶಸ್ತ್ರಸಜ್ಜಿತ ವ್ಯಕ್ತಿಗಳು ಶನಿವಾರ ದಾಳಿ ನಡೆಸಿದ್ದಾಗಿ ಸುಡಾನ್‌ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಮೂಲಗಳು ತಿಳಿಸಿವೆ.

ಮಸಲಿತ್ ಮತ್ತು ಅರಬ್‌ ಬುಡಕಟ್ಟು ಸಮುದಾಯದವರ ನಡುವೆ ಸಂಘರ್ಷ ನಡೆದಿರುವುದಾಗಿ ಸ್ಥಳೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಸಂಘರ್ಷವನ್ನು ನಿಯಂತ್ರಿಸಲು ಸೇನಾಪಡೆಯನ್ನು ನಿಯೋಜಿಸುವಂತೆ ಸ್ಥಳೀಯ ಆಡಳಿತ ಮನವಿ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಸ್ಟೆರಿಯಲ್ಲಿರುವ 500 ಮಂದಿ ನಿರಾಶ್ರಿತರು ನಮ್ಮನ್ನು ದಾಳಿಕೋರರಿಂದ ರಕ್ಷಿಸುವಂತೆ ಒತ್ತಾಯಿಸಿ ಮಸಲಿತ್ ಸುಲ್ತಾನ್ ಮನೆಯ ಎದುರು ಪ್ರತಿಭಟನೆ ನಡೆಸಲು ಶುರು ಮಾಡಿದರು. ಇದೇ ಸಂಘರ್ಷ ನಡೆಯಲು ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT