ಸೋಮವಾರ, ಸೆಪ್ಟೆಂಬರ್ 28, 2020
24 °C

ಅಸ್ಸಾಂ ಪ್ರವಾಹ: ನೆರವಿಗೆ ವಿಶ್ವಸಂಸ್ಥೆ ಸಿದ್ಧ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಪ್ರವಾಹಪೀಡಿತ ಅಸ್ಸಾಂ ರಾಜ್ಯದಲ್ಲಿ ಪರಿಹಾರ ಕಾರ್ಯಗಳಿಗೆ ಭಾರತ ಸರ್ಕಾರಕ್ಕೆ ಅಗತ್ಯ ಬೆಂಬಲ ನೀಡಲು ವಿಶ್ವಸಂಸ್ಥೆ ಸಿದ್ಧ ಎಂದು ವಿಶ‍್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ವಕ್ತಾರರು ತಿಳಿಸಿದ್ದಾರೆ. ಅಸ್ಸಾಂನಲ್ಲಿ ಪ್ರವಾಹದಿಂದಾಗಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಜನರು ಅತಂತ್ರರಾಗಿದ್ದಾರೆ.

ಭಾರತದ ಅಸ್ಸಾಂ ಮತ್ತು ನೆರೆಯ ನೇಪಾಳದಲ್ಲಿ ಪ್ರವಾಹದಿಂದಾಗಿ ಸುಮಾರು 40 ಲಕ್ಷ ಜನರು ಅತಂತ್ರರಾಗಿದ್ದಾರೆ ಎಂಬ ಮಾಹಿತಿಯು ವಿಶ‍್ವಸಂಸ್ಥೆಗೆ ಬಂದಿದೆ ಎಂದು ವಕ್ತಾರ ಸ್ಟೀಫನ್‍ ದುಜಾರ್ರಿಕ್ ಹೇಳಿದ್ದಾರೆ.

ಭಾರತ ಸರ್ಕಾರ ಬಯಸಿದರೆ ನೆರವು ನೀಡಲು ಸಿದ್ಧ. ಸಂಪರ್ಕ ಕೊರತೆ ಇರುವೆಡೆ ಭೂಕುಸಿತದಿಂದಾಗಿ ಜನರಿಗೆ ಸೌಲಭ್ಯ ತಲುಪಿಸುವುದೇ ದುಸ್ತರವಾಗಿದೆ. ಬಾಧಿತರಿಗೆ ನೆರವಾಗಲು ವರ್ಲ್ಡ್ ಫುಡ್‍ ಪ್ರೋಗ್ರಾಂ ಕಾರ್ಯಕ್ರಮ ರೂಪಿಸುತ್ತಿದೆ. ಸಂಪರ್ಕ ಕೊರತೆ ಇರುವೆಡೆ ತಲುಪಲು ಹೆಲಿಕಾಪ್ಟರ್‌ ಬಳಕೆಯಷ್ಟೇ ಉಳಿದ ಮಾರ್ಗ ಎಂದು ಅವರು ಹೇಳಿದ್ದಾರೆ.

ಅಸ್ಸಾಂನ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ (ಎಎಸ್‍ಡಿಎಂಎ) ಪ್ರಕಾರ, ರಾಜ್ಯದ 24 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 24.3 ಲಕ್ಷ ಜನರು ಪ್ರವಾಹ ಪರಿಸ್ಥಿತಿಯಿಂದ ಬಾಧಿತರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು