ಮಂಗಳವಾರ, ಆಗಸ್ಟ್ 3, 2021
21 °C

Covid-19 World update | ಅಮೆರಿಕದಲ್ಲಿ ಒಂದೇ ದಿನ 65,551 ಪ್ರಕರಣ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್‌ ಧರಿಸಿರುವ ವ್ಯಕ್ತಿಗಳು–ಸಾಂದರ್ಭಿಕ ಚಿತ್ರ

ಪ್ಯಾರಿಸ್‌: ಡಿಸೆಂಬರ್‌ನಲ್ಲಿ ಕೊರೊನಾ ವೈರಸ್‌ ಪತ್ತೆಯಾದಾಗಿನಿಂದ ಜಗತ್ತಿನಾದ್ಯಂತ ಸೋಂಕಿನಿಂದಾಗಿ ಕನಿಷ್ಠ 5,50,910 ಮಂದಿ ಸಾವಿಗೀಡಾಗಿದ್ದಾರೆ. 196 ರಾಷ್ಟ್ರಗಳಲ್ಲಿ ಒಟ್ಟು‌ 1,21,23,290ಕ್ಕೂ ಅಧಿಕ ಕೋವಿಡ್‌–19 ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 64,61,200 ಮಂದಿ ಗುಣಮುಖರಾಗಿದ್ದಾರೆ.

ಕೋವಿಡ್‌ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಅಮೆರಿಕದಲ್ಲಿ ಗುರುವಾರದ ವರೆಗೂ 24 ಗಂಟೆಗಳಲ್ಲಿ 65,551 ಹೊಸ ಪ್ರಕರಣಗಳು ದಾಖಲಾಗಿದೆ. ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಲೆಕ್ಕದ ಪ್ರಕಾರ, ಒಂದೇ ದಿನ ಅಮೆರಿಕದಲ್ಲಿ ದಾಖಲಾಗಿದ್ದ ಅತಿ ಹೆಚ್ಚು ಸೋಂಕು ಪ್ರಕರಣಗಳ ಸಂಖ್ಯೆ 60,200. ಒಟ್ಟು 31 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 1,33,000 ಮಂದಿ ಸಾವಿಗೀಡಾಗಿದ್ದಾರೆ. 9,53,420 ಸೋಂಕಿನಿಂದ ಗುಣಮುಖರಾಗಿದ್ದಾರೆ.

ಬುಧವಾರದಿಂದ ಗುರುವಾರದ ವರೆಗೂ ಜಗತ್ತಿನಾದ್ಯಂತ ಕೋವಿಡ್‌ ದೃಢಪಟ್ಟ 2,05,624 ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 5,290 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬ್ರೆಜಿಲ್‌ನಲ್ಲೇ 1,223 ಜನ ಹಾಗೂ ಅಮೆರಿಕದಲ್ಲಿ 946 ಮಂದಿ ಸಾವಿಗೀಡಾಗಿದ್ದಾರೆ.

ಬೊಲಿವಿಯಾದ ಹಂಗಾಮಿ ಅಧ್ಯಕ್ಷೆ ಜೆನಿನ್‌ ಅನೆಝ್‌ (53) ಅವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಐಸೊಲೇಷನ್‌ನಿಂದಲೇ ಕಾರ್ಯಾಚರಿಸುವುದಾಗಿ ಅವರು ಟ್ವೀಟಿಸಿದ್ದಾರೆ. ಇಟಲಿ ತನ್ನ ರಾಷ್ಟ್ರ ಪ್ರವೇಶಿಸಲು ಬ್ರೆಜಿಲ್‌ ಹಾಗೂ ಇತರೆ 12 ರಾಷ್ಟ್ರಗಳ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದೆ.

ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 17,13,160 ಪ್ರಕರಣಗಳು ಹಾಗೂ 67,964 ಮಂದಿ ಸಾವಿಗೀಡಾಗಿದ್ದಾರೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ 2,87,621 ಪ್ರಕರಣಗಳಿಂದ 44,602 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 2,42,363 ಪ್ರಕರಣಗಳು ಹಾಗೂ 34,926 ಸಾವು, ಮೆಕ್ಸಿಕೊದಲ್ಲಿ 2,75,003 ಪ್ರಕರಣಗಳು ಹಾಗೂ 32,796 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 7,94,842 ಪ್ರಕರಣಗಳು ಹಾಗೂ 21,623 ಮಂದಿ ಸಾವಿಗೀಡಾಗಿದ್ದಾರೆ.

ಹಾಂಗಾಂಕ್‌ ಮತ್ತು ಮಕಾವ್‌ ಹೊರತುಪಡಿಸಿ ಚೀನಾದಲ್ಲಿ 83,581 ಪ್ರಕರಣಗಳು ವರದಿಯಾಗಿದ್ದು, 4,634 ಮಂದಿ ಮೃತಪಟ್ಟಿದ್ದಾರೆ.

ಯುರೋಪ್‌–  2,01,290 ಸಾವು; 27,86,435 ಪ್ರಕರಣಗಳು
ಯುಎಸ್‌ ಮತ್ತು ಕೆನೆಡಾ– 1,41,586 ಸಾವು; 31,88,126 ಪ್ರಕರಣಗಳು
ಲ್ಯಾಟಿನ್‌ ಅಮೆರಿಕ ಮತ್ತು ಕೆರಿಬಿಯನ್‌– 1,35,663 ಸಾವು; 31,13,598 ಪ್ರಕರಣಗಳು
ಏಷ್ಯಾ– 40,710 ಸಾವು; 16,19,036 ಪ್ರಕರಣಗಳು
ಮಧ್ಯ ಪ್ರಾಚ್ಯ– 19,260 ಸಾವು; 8,79,503 ಪ್ರಕರಣಗಳು
ಆಫ್ರಿಕಾ– 12,266 ಸಾವು; 5,25,980 ಪ್ರಕರಣಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು