ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌ ವಿರುದ್ಧ ಕಾನೂನು ರೂಪಿಸಿದ ಚೀನಾ ಅಧಿಕಾರಿಗಳಿಗೆ ಅಮೆರಿಕ ನಿರ್ಬಂಧ

Last Updated 26 ಜೂನ್ 2020, 7:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ವಿವಾದಾತ್ಮಕ ಭದ್ರತಾ ಕಾನೂನಿನ ಮೂಲಕ ಹಾಂಗ್‌ಕಾಂಗ್‌ನ‌ ಸ್ವಾಯತ್ತತೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವಚೀನಾದ ಅಧಿಕಾರಿಗಳ ಮೇಲೆ ನಿರ್ಬಂಧ ಹೇರುವ ಮಸೂದೆಗೆಅಮೆರಿಕದ‌ ಸೆನೆಟ್‌ ಗುರುವಾರ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದೆ.

ಚೀನಾ ಅಧಿಕಾರಿಗಳು ಮತ್ತು ಹಾಂಗ್‌ಕಾಂಗ್‌ ಪೊಲೀಸರು ಹಾಗೂ ಅವರೊಂದಿಗೆ ಮಹತ್ವದ ವಹಿವಾಟುಗಳನ್ನು ನಡೆಸುವ ಬ್ಯಾಂಕುಗಳ ಮೇಲೂ ನಿರ್ಬಂಧಗಳನ್ನು ಹೇರುವ ಈ ಮಸೂದೆಗೆ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಂಗೀಕಾರ ದೊರೆಯುವುದು ಬಾಕಿ ಇದೆ.

ಚೀನಾ ವಿವಾದಾತ್ಮಕ ಭದ್ರತಾ ಕಾನೂನನ್ನು ಜಾರಿಗೊಳಿಸುತ್ತಿದ್ದಂತೆ, ಹಾಂಗ್‌ಕಾಂಗ್‌ನಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಪ್ರತಿಭಟನೆಗಳು ನಡೆದಿದ್ದವು.

‘ಹಾಂಗ್‌ಕಾಂಗ್‌ ಜನರ ಸ್ವಾತಂತ್ರ್ಯಗಳನ್ನು ಕಸಿದುಕೊಳ್ಳುವ ಪ್ರಕ್ರಿಯೆಯನ್ನುಚೀನಾ ಮುಂದುವರಿಸಿದೆ. ಹಾಗಾಗಿ ಈ ಮಸೂದೆಯನ್ನು ರೂಪಿಸಲಾಗಿದೆ. ಅದರಂತೆ, ಹಾಂಗ್‌ಕಾಂಗ್ಪ್ರಜೆಗಳಸ್ವಾತಂತ್ರ್ಯವನ್ನು ನಿಯಂತ್ರಿಸುವ ಕ್ರಮವನ್ನು ಚೀನಾ ಸರ್ಕಾರವು ಮುಂದುವರಿಸಿದರೆ, ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ತೋರಿಸುವುದು ನಿಜಕ್ಕೂ ಮುಖ್ಯವಾಗಿದೆ’ ಎಂದು ಸೆನೆಟರ್‌ ಕ್ರಿಸ್‌ ವಾನ್‌ ಹಾಲೆನ್‌ ತಿಳಿಸಿದ್ದಾರೆ.

‘ಚೀನಾ ಕಮ್ಯುನಿಸ್ಟ್‌ ಪಕ್ಷವು ಹಾಂಗ್‌ಕಾಂಗ್‌ನಲ್ಲಿ ಮುಕ್ತ ಅಭಿವ್ಯಕ್ತಿ ಸ್ವಾತಂತ್ಯವನ್ನು ಮೌನವಾಗಿಸುತ್ತಿದೆ. ಇಂದು ಯುಎಸ್‌ ಸೆನೆಟ್, ಚೀನಾ ಕಮ್ಯುನಿಸ್ಟ್‌ ಪಕ್ಷದರಾಷ್ಟ್ರೀಯ ಭದ್ರತೆಯ ಕಾನೂನು ಹಾಂಗ್‌ಕಾಂಗ್‌ ಸ್ವಾಯತ್ತತೆಯನ್ನು ಉಲ್ಲಂಘಿಸುತ್ತದೆ ಎಂದು ದೃಢಪಡಿಸಿದೆ. ಎಲ್ಲ ಸ್ವತಂತ್ರ ರಾಷ್ಟ್ರಗಳ ಜನರೂ ಹಾಂಗ್‌ಕಾಂಗ್‌ ಪರವಾಗಿ ನಿಲ್ಲಬೇಕು’ ಎಂದು ಯುಎಸ್‌ ಸೆನೆಟರ್‌ಮಾರ್ಷಾ ಬ್ಲಾಕ್‌ಬರ್ನ್ ಟ್ವಿಟರ್‌ ಮೂಲಕ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT