ಬುಧವಾರ, ಆಗಸ್ಟ್ 4, 2021
24 °C

World corona update | ವಿಶ್ವದಾದ್ಯಂತ 1.26 ಕೋಟಿ ಸೋಂಕಿತರು, 73 ಲಕ್ಷ ಗುಣಮುಖ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ 1.26 ಕೋಟಿಗೆ ಏರಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5.62ಲಕ್ಷಕ್ಕೆ ತಲುಪಿದ್ದು, 73 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ 3,291,786 ಮಂದಿಗೆ ಸೋಂಕು ತಗುಲಿದ್ದು, ಬ್ರೆಜಿಲ್‌ನಲ್ಲಿ 18 ಲಕ್ಷ ಮಂದಿ, ರಷ್ಯಾದಲ್ಲಿ 713936 ಮಂದಿಗೆ ಸೋಂಕು ತಗುಲಿದೆ. ಅಮೆರಿಕಾದಲ್ಲಿ 1.36 ಲಕ್ಷ ಮಂದಿ ಸಾವನ್ನಪ್ಪಿದ್ದರೆ, ಬ್ರೆಜಿಲ್‌‌ನಲ್ಲಿ 70,524 ಮಂದಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಒಟ್ಟು 8.22 ಲಕ್ಷ ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 22,144 ಮಂದಿ ಸಾವನ್ನಪ್ಪಿದ್ದಾರೆ. 51, 206 ಮಂದಿ ಗುಣಮುಖರಾಗಿದ್ದಾರೆ.

ವಿಶ್ವದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನದಲ್ಲಿ 2,752 ಹೊಸ ಪ್ರಕರಣಗಳು ವರದಿಯಾಗಿದ್ದು, 65 ಮಂದಿ ಸಾವನ್ನಪ್ಪಿದ್ದಾರೆ. ಮೆಕ್ಸಿಕೋದಲ್ಲಿ 6,891 ಹೊಸಪ್ರಕರಣಗಳು ವರದಿಯಾಗಿದ್ದು, 665 ಮಂದಿ ಸಾವನ್ನಪ್ಪಿದ್ದಾರೆ. ಕಜಕಿಸ್ಥಾನದಲ್ಲಿ 1,708 ಹೊಸ ಪ್ರಕರಣಗಳು ವರದಿಯಾಗಿವೆ. ಬೊಲಿವಿಯಾದಲ್ಲಿ 1,452 ಹೊಸ ಪ್ರಕರಣಗಳು ವರದಿಯಾಗಿದ್ದು, 64 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಉಗಮ ಸ್ಥಾನ ಚೀನಾದಲ್ಲಿ 2 ಹೊಸ ಪ್ರಕರಣಗಳು ವರದಿಯಾಗಿವೆ.

ಹೊಂಡುರಾಸ್ ರಾಷ್ಟ್ರದಲ್ಲಿ 669 ಹೊಸ ಪ್ರಕರಣಗಳು ವರದಿಯಾಗಿದ್ದು, 46 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕೊರಿಯಾದಲ್ಲಿ 35, ಕಿರ್ಜಿಸ್ಥಾನದಲ್ಲಿ 552, ಆಸ್ಟ್ರೇಲಿಯಾದಲ್ಲಿ 190 ಪ್ರಕರಣಗಳು ವರದಿಯಾಗಿವೆ. ನ್ಯೂಜಿಲ್ಯಾಂಡ್, ಬಹಮಾಸ್, ವಿಯೆಟ್ನಾಂಗಳಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿವೆ.

ಇದನ್ನೂ ಓದಿ: 1.22 ಕೋಟಿ ಸೋಂಕಿತರು, 5.54 ಲಕ್ಷ ಮಂದಿ ಸಾವು

ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ ಶನಿವಾರದವರೆಗೆ 2.46ಲಕ್ಷ ಮಂದಿಗೆ ಏರಿದೆ. ಇದುವರೆಗೆ 5123 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿಗೆ ಇದುವರೆಗೆ ಸ್ಪೇನ್‌ನಲ್ಲಿ 28,403, ಇಟಲಿಯಲ್ಲಿ 34,938, ಫ್ರಾನ್ಸ್‌‌ನಲ್ಲಿ 30,004 ಹಾಗೂ ಜರ್ಮನಿಯಲ್ಲಿ 9,130 ಮಂದಿ ಅಸುನೀಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು