ಇಂಡೋನೆಷ್ಯಾದಲ್ಲಿ ಮತ್ತೆ ಭೂಕಂಪ; 4 ದಿನದಲ್ಲಿ ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿಕೆ

7

ಇಂಡೋನೆಷ್ಯಾದಲ್ಲಿ ಮತ್ತೆ ಭೂಕಂಪ; 4 ದಿನದಲ್ಲಿ ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿಕೆ

Published:
Updated:
Deccan Herald

ಮಾತಾರಾಂ: ಇಂಡೋನೇಷ್ಯಾದ ಲಾಂಬೂಕ್‌ ದ್ವೀಪದಲ್ಲಿ ಗುರುವಾರ ಮತ್ತೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.9 ನಷ್ಟು ತೀವ್ರತೆ ದಾಖಲಾಗಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಭಾನುವಾರ ಇದೇ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಈ ವರೆಗೆ 300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

‘ಗುರುವಾರ ಕಂಪನ ಪ್ರಬಲವಾಗಿತ್ತು. ಭಾನುವಾರದ ನಂತರ 355 ಮರುಕಂಪನಗಳು ದಾಖಲಾಗಿವೆ’ ಎಂದು ರಾಷ್ಟ್ರೀಯ ವಿಪತ್ತು ಏಜೆನ್ಸಿಯ ವಕ್ತಾರ ಸುಟೊಪೊ ಪುರ್ವೊ ನುಗ್ರಾಹೊ ಅವರು ತಿಳಿಸಿದ್ದಾರೆ.

ಭೂಕಂಪದಿಂದ ತೊಂದರೆಗೊಳಗಾದ ಜನರಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಯತ್ನಗಳು ನಡೆದಿರುವಾಗಲೇ ಮತ್ತೆ ಭೂಕಂಪನ ಸಂಭವಿಸಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದೆ.

‌ಲಾಂಬೂಕ್‌ನ ಕುಗ್ರಾಮಗಳಲ್ಲಿರುವ 20 ಸಾವಿರ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಆದ್ಯತೆ ನೀಡಿರುವುದಾಗಿ ಇಂಡೋನೇಷ್ಯಾದ ರೆಡ್‌ಕ್ರಾಸ್ ಹೇಳಿದೆ. 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !