ಮುಂಬೈ ದಾಳಿ ಸಂಚುಕೋರ ರಾಣಾ ಭಾರತಕ್ಕೆ ಹಸ್ತಾಂತರ ಸಾಧ್ಯತೆ

7

ಮುಂಬೈ ದಾಳಿ ಸಂಚುಕೋರ ರಾಣಾ ಭಾರತಕ್ಕೆ ಹಸ್ತಾಂತರ ಸಾಧ್ಯತೆ

Published:
Updated:

ವಾಷಿಂಗ್ಟನ್‌: ಅಮೆರಿಕದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಮುಂಬೈ ದಾಳಿ ಸಂಚುಕೋರ ತಹಾವುರ್‌ ಹುಸೈನ್‌ ರಾಣಾನನ್ನು ಆತನ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ–ಕೆನಡಾ ಪ್ರಜೆ ಹಾಗೂ ಷಿಕಾಗೊ ನಿವಾಸಿಯಾಗಿರುವ 58 ವರ್ಷದ ರಾಣಾನಿಗೆ ನ್ಯಾಯಾಲಯ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 2021ರಲ್ಲಿ ಈತನ ಶಿಕ್ಷೆಯ ಕಲಾವಧಿ ಪೂರ್ಣಗೊಳ್ಳಲಿದೆ.

ಪಾಕಿಸ್ತಾನದ ಲಷ್ಕರ್ ಉಗ್ರರಿಗೆ ಬೆಂಬಲ ನೀಡಿದ ಮತ್ತು ಡೆನ್ಮಾರ್ಕ್‌ನ ದಿನಪತ್ರಿಕೆ ಮೇಲೆ ದಾಳಿ ಎಸಗಲು ಸಂಚು ಹೂಡಿದ್ದ ಆರೋಪದಲ್ಲಿ ರಾಣಾನನ್ನು 2009ರಲ್ಲಿ ಪೊಲೀಸರು ಬಂಧಿಸಿದ್ದರು.

ಹಸ್ತಾಂತರಿಸುವ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅಮೆರಿಕದ ಟ್ರಂಪ್‌ ಆಡಳಿತವು ಭಾರತಕ್ಕೆ ಸಹಕಾರ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿಯ ನ್ಯಾಷನಲ್‌ ಡಿಫೆನ್ಸ್‌ ಕಾಲೇಜು ಮತ್ತು ಚಾಬಾದ್‌ ಹೌಸ್‌ ಮೇಲೆ ದಾಳಿ ನಡೆಸಲು ಹೂಡಿರುವ ಸಂಚಿನಲ್ಲಿ ರಾಣಾ ಭಾಗಿಯಾಗಿದ್ದು, ಆತನನ್ನು ಹಸ್ತಾಂತರಿಸಬೇಕು ಎಂದು ಭಾರತ ಅಮೆರಿಕವನ್ನು ಕೋರಿತ್ತು.

‘ರಾಣಾನ ಹಸ್ತಾಂತರಕ್ಕಾಗಿ ಎರಡೂ ದೇಶಗಳ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಸವಾಲಾಗಿದೆ’ ಎಂದೂ ಮೂಲಗಳು ಹೇಳಿವೆ.

ಈ ಕುರಿತು ಚರ್ಚಿಸಲು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಈಚೆಗೆ ಅಮೆರಿಕಕ್ಕೆ ಭೇಟಿ ನೀಡಿತ್ತು.

ಮುಂಬೈಯಲ್ಲಿ ಲಷ್ಕರ್‌ ಉಗ್ರರು ನಡೆಸಿದ ದಾಳಿಗೆ ಆರು ಮಂದಿ ಅಮೆರಿಕ ಪ್ರಜೆಗಳು ಸೇರಿದಂತೆ 166 ಮಂದಿ ಬಲಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !