‘ವಿದ್ಯಾರ್ಥಿಗಳು ವಿಶಾಲ ಬುದ್ಧಿ ಬೆಳೆಸಿಕೊಳ್ಳಿ’

7

‘ವಿದ್ಯಾರ್ಥಿಗಳು ವಿಶಾಲ ಬುದ್ಧಿ ಬೆಳೆಸಿಕೊಳ್ಳಿ’

Published:
Updated:
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ನಾಯರಿ ಸಮಾಜ ಸಂಘ (ರಿ) ಬ್ರಹ್ಮಾವರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ‘ಅಂಬಾ ಶಪಥ’ ಮತ್ತು ‘ರಾಣಿಗೆ ಕೈಕೊಟ್ಟ ಮಾಣಿ‘ ಯಕ್ಷಗಾನ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಬೆಂಗಳೂರು:‌ ‘ಲಂಡನ್‌ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯ ಮಾದರಿಯಲ್ಲೇ ಬೆಂಗಳೂರಿನಲ್ಲೂ ಅಂಬೇಡ್ಕರ್‌ ಯೂನಿವರ್ಸಿಟಿ ಆಫ್ ಎಕನಾಮಿಕ್ಸ್ ಕಾಲೇಜು ನಿರ್ಮಾಣವಾಗುತ್ತಿದೆ’ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ನಾಯರಿ ಸಮಾಜ ಸಂಘ (ರಿ) ಬ್ರಹ್ಮಾವರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ‘ಅಂಬಾ ಶಪಥ’ ಮತ್ತು ‘ರಾಣಿಗೆ ಕೈಕೊಟ್ಟ ಮಾಣಿ’ ಯಕ್ಷಗಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

‌‘ವಿದ್ಯಾರ್ಥಿಗಳು ವಿಶಾಲವಾದ ಬುದ್ಧಿ ಬೆಳೆಸಿಕೊಂಡು, ವಿಶ್ವಪ್ರಜೆಗಳಾಗುವ ಅರ್ಹತೆ ಪಡೆಯಬೇಕು. ವಿದ್ಯಾರ್ಥಿ ಜೀವನದ ಯಶಸ್ಸು ಅವರ ಶಿಸ್ತು ಬದ್ಧವಾಗಿರಬೇಕು. ಸರ್ಕಾರದಿಂದ ಸಿಗುವ ನಾನಾ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’‍ ಎಂದು ಹೇಳಿದರು.

ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲ ಕೃಷ್ಣ ನಾಯರಿ ಮಾತನಾಡಿ, ‘ಉತ್ತಮ ಹವ್ಯಾಸ ಮತ್ತು ಸತತ ಪ್ರಯತ್ನದಿಂದ ಉನ್ನತ ಮಟ್ಟಕ್ಕೆ ಏರಲು ಸಾಧ್ಯ. ಓದಿನೊಂದಿಗೆ ಕ್ರೀಡೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೂ ಪ್ರಾಶಸ್ತ್ಯ ನೀಡಬೇಕು. ಕೆಟ್ಟ ಚಟಗಳನ್ನು ಮೈಗೂಡಿಸಿಕೊಳ್ಳಬಾರದು’ ಎಂದು ಹೇಳಿದರು.

ಸಮುದಾಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಶ್ರೇಯಸ್‌.ವಿ, ಪ್ರಣೀತ್‌.ಪಿ.ನಾಯರಿ, ಕಾರ್ತಿಕ್‌ ನಾಯರಿ ಮತ್ತು ಅನ್ವಿತಾ ನಾಯರಿ ಅವರಿಗೆ ₹5 ಸಾವಿರ ನಗದು ನೀಡಿ ಪುರಸ್ಕರಿಸಲಾಯಿತು.‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !