ಬೆಂಗಳೂರು: ಹೊಸ ಪ್ರಬಂಧಕಾರರ ಅನ್ವೇಷಣೆಯನ್ನು ‘ಸುಧಾ’ ನಿರಂತರ ಮಾಡುತ್ತಿದೆ. 2026ನೇ ಸಾಲಿನಲ್ಲಿ ಏರ್ಪಡಿಸಿದ್ದ ‘ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ’ ಫಲಿತಾಂಶ ಹೀಗಿದೆ: ಪ್ರಥಮ ಬಹುಮಾನ ವಾಸುದೇವ ಶರ್ಮಾ ಎನ್.ವಿ. (ಒಂದೊಂದು ಬೀಗವೂ ಒಂದೊಂದು ಕುತೂಹಲ), ದ್ವಿತೀಯ ಬಹುಮಾನ ಸಂದೇಶ್ ಎಚ್. ನಾಯ್ಕ್ (ಅಜ್ಜನ ಕಿಸೆಯ ಆಳ–ಅಗಲ), ತೃತಿಯ ಬಹುಮಾನ ಇಂದಿರಾ ಮೋಟೆಬೆನ್ನೂರ (ಒಲೆಯೋ ಜೀವ ಸೆಲೆಯೋ) ಪಡೆದಿದ್ದಾರೆ.

ಬಹುಮಾನಿತ ಪ್ರಬಂಧಗಳಿಗೆ ಕ್ರಮವಾಗಿ ₹20,000, ₹15,000 ಹಾಗೂ ₹10,000 ದೊರೆಯಲಿದೆ. ಈ ಪ್ರಬಂಧಗಳು ‘ಸುಧಾ ಯುಗಾದಿ ವಿಶೇಷಾಂಕ’ದಲ್ಲಿ ಪ್ರಕಟಗೊಳ್ಳುತ್ತವೆ.

ಪಿ.ಬಿ. ಪ್ರಸನ್ನ (ನಾಯಿ ಒಂದು ಭಾವ ಹಲವು), ಪಾಪುಗುರು (ಲ್ಯಾಪ್ಟಾಪ್ ಖರೀದಿಸಿದ ಫಜೀತಿ), ದಾದಾಪೀರ್ ಜೈಮನ್ (ಭಾಷೆ ಎಂಬ ಭಾವಲೋಕದ ದಾರಿ), ಸುಧಾಕರ ದೇವಾಡಿಗ ಬಿ. (ಸಾವಧಾನವೂ ಅವಸರದ ಬೆನ್ನೇರಿದಾಗ), ಡಾ. ಸುಂಕಂ ಗೋವರ್ಧನ (ತನ್ನ ಬಣ್ಣಿಸಬೇಕು) ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಇವುಗಳನ್ನು ‘ಸುಧಾ’ ವಾರ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಈ ಬಾರಿ 300ಕ್ಕೂ ಅಧಿಕ ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು.

ಲೇಖಕರಾದ ಸಂಧ್ಯಾ ಹೊನಗುಂಟಿಕರ್ ಮತ್ತು ಕಲೀಂ ಉಲ್ಲಾ ಈ ಬಾರಿಯ ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.