ಕೋಳಿ ಸಾರು ಮುದ್ದೆ ಪ್ರಿಯೆ

7

ಕೋಳಿ ಸಾರು ಮುದ್ದೆ ಪ್ರಿಯೆ

Published:
Updated:
Deccan Herald

ನಾನು ಸಂಗೀತದಷ್ಟೇ ಆಹಾರ ಪ್ರಿಯೆ. ದಕ್ಷಿಣ ಭಾರತ ನನ್ನ ನೆಲೆಯಾದ್ದರಿಂದ ಇಲ್ಲಿನ ಶೈಲಿ ಆಹಾರವೇ ನನ್ನ ಆಲ್‌ಟೈಮ್ ಫೇವರಿಟ್.

ಗಾಯನ ನನ್ನ ವೃತ್ತಿ. ಹೀಗಾಗಿ, ಹಾಡುವ ಅವಕಾಶ ಸಿಕ್ಕಾಗ ದೇಶ–ವಿದೇಶಗಳಿಗೆ ಹೋಗುತ್ತಿರುತ್ತೇನೆ. ಅಲ್ಲಿಯ ಆಹಾರವನ್ನು ಟೇಸ್ಟ್ ಮಾಡುತ್ತೇನೆ. ಅದು ನನ್ನ ಹವ್ಯಾಸಗಳಲ್ಲೊಂದು.

ನಾನು ಬಿಗ್ ಫುಡ್ಡಿ. ಅದರಲ್ಲೂ ಫ್ಯೂರ್ ನಾನ್‌ವೆಜ್ ಪ್ರಿಯೆ. ಮಾಂಸಾಹಾರದಲ್ಲಿ ಮುದ್ದೆ ಹಾಗೂ ನಾಟಿಕೋಳಿ ಸಾರು ನನ್ನ ಫೇವರಿಟ್. ಚಿಕನ್ ಹಾಗೂ ಮಟನ್‌ನ ಬಹುತೇಕ ಖಾದ್ಯಗಳು ನನಗೆ ಇಷ್ಟ. ಸಸ್ಯಾಹಾರದಲ್ಲಿ ಹಲವು ಖಾದ್ಯಗಳು ಇಷ್ಟ.

ನನಗೆ ನನ್ನಮ್ಮ ಮಾಡುವ ಎಲ್ಲ ಅಡುಗೆ ಇಷ್ಟ. ಹುಟ್ಟಿದಾಗಿನಿಂದಲೂ ಊಟದ ಜೊತೆಗೆ ಪ್ರೀತಿಯನ್ನು ಸೇರಿಸಿ ನನಗೆ ಉಣಬಡಿಸುತ್ತಿದ್ದರು. ಅವರು ಮಾಡುವ ಅಡುಗೆಯ ರುಚಿಯನ್ನು ನಳಮಹರಾಜ ಬಂದರೂ ರಿಪ್ಲೇಸ್ ಮಾಡಲು ಸಾಧ್ಯವಿಲ್ಲ.

ಅಮ್ಮ ಮಾಡುವ ಮುದ್ದೆ, ನಾಟಿಕೋಳಿ ಸಾರು, ಮಟನ್ ಕೈಮಾ, ಚಿತ್ರನ್ನ ಹಾಗೂ ಹುಳಿ ಅನ್ನ ಬಲುಪ್ರೀತಿ. ಅಮ್ಮನಂತೆ ನಾನೂ ಮುದ್ದೆ ಹಾಗೂ ಚಪಾತಿ ಚೆನ್ನಾಗಿ ಮಾಡುತ್ತೇನೆ. ತಿಂದವರು ಮುದ್ದೆಯನ್ನು ಹಲ್ವಾದಂತೆ ಮಾಡುತ್ತೀಯಾ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದುಂಟು.

ನಾನು ಮೊದಲ ಬಾರಿಗೆ ಅಡುಗೆ ಮಾಡಿದ್ದು ಸರಿಯಾಗಿ ನೆನಪಿಲ್ಲ. ಆದರೆ, ಒಮ್ಮೆ ಮ್ಯಾಗಿ ಮಾಡಿದ್ದೆ. ಅದು ಅಷ್ಟೊಂದು ಶ್ರಮ ಹಾಕಿ ಮಾಡುವ ಅಡುಗೆಯಲ್ಲವಾದ್ದರಿಂದ ಆ ಪ್ರಯೋಗಕ್ಕೆ ಕೈಹಾಕಿದ್ದೆ. ಅದು ಸೂಪ್‌ ರೀತಿ ಆಗಿತ್ತು. ನನ್ನ ತಮ್ಮ ನನನ್ನು ತೆಗಳಿಕೊಂಡು ತಿಂದಿದ್ದ.

ನಾನು ಅಡುಗೆ ಮಾಡುವುದನ್ನು ಕಲಿತದ್ದು ನನ್ನ ಅತ್ತೆ ಅವರಿಂದ. ಅವರೇ ನನ್ನ ಬೇಸ್ಟ್ ಟೀಚರ್ ಅಡುಗೆ ವಿಚಾರದಲ್ಲಿ. ನಾನು ಮಾಡುವ ಬಹುತೇಕ ಅಡುಗೆಗಳು ಅವರಿಗೆ ಇಷ್ಟ. ಅಡುಗೆ ಮಾಡುವಾಗ ಸಂಗೀತ ತಾನಾಗಿಯೇ ನನ್ನ ಬಾಯಲ್ಲಿ ಗುನುಗುತ್ತದೆ. ಖಾಸಗಿ ವಾಹಿನಿಯೊಂದರ ಕಿಚನ್ ಕಿಲಾಡಿ ಕಾರ್ಯಕ್ರಮದ ರನ್ನರ್ ಆಫ್ ಆಗಿ ಹೊರಹೊಮ್ಮಿದ್ದೇನೆ. ಆ ಕಾರ್ಯಕ್ರಮದಲ್ಲಿ ನಾನು ಅಡುಗೆ ಬಗ್ಗೆ ಸಾಕಷ್ಟು ಕಲಿತೆ.

ರಾಜಾಜಿನಗರದಲ್ಲಿ ‘ಸಾಗರ್’ ಹೋಟೆಲ್ ಇದೆ. ಅಲ್ಲಿ ಸಿಗುವ ವಡಾ ಪಾವ್, ಪಾವ್ ಭಾಜಿ, ಜಿಲೇಬಿ ತುಂಬಾ ರುಚಿಕರವಾಗಿರುತ್ತವೆ. ಅಲ್ಲಿನ ‘ತಾಜ್‌ ಚಿಚ್ಚಾಬಸ್’ ಹೋಟೆಲ್‌ನ ಬಿರಿಯಾನಿ ಹಾಗೂ ಕಾಲು ಸೂಪು ತುಂಬಾ ಚೆನ್ನಾಗಿ ಇರುತ್ತದೆ.

ಸುಪ್ರಿಯಾ ಹೇಳಿದ ರೆಸಿಪಿ

ಬೇಕಾಗುವ ಸಾಮಗ್ರಿ: ಮಶ್ರೂಮ್, ದಪ್ಪ ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ದನಿಯಾ ಪುಡಿ, ಮೆಣಸಿನಕಾಯಿ ಪುಡಿ, ಗರಂ ಮಸಲಾ, ಶುಂಠಿ, ಟೊಮೆಟೊ, ಎಣ್ಣೆ, ಕೊತ್ತಂಬರಿ ಸೊಪ್ಪು, ಉಪ್ಪು, ಸಾಸಿವೆ, ಕರಬೇವುಸೊಪ್ಪು.

ಮಾಡುವ ವಿಧಾನ: ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ಅದಕ್ಕೆ ಸಾಸಿಸೆ ಹಾಗೂ ಕರಬೇವು ಸೊಪ್ಪು ಹಾಕಬೇಕು. ಕತ್ತರಿಸಿದ ಈರುಳ್ಳಿ ಹಾಗೂ ಜಜ್ಜಿದ ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಚೆನ್ನಾಗಿ ಹುರಿಯಬೇಕು.

ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಕತ್ತರಿಸಿದ ಟೊಮೆಟೊ, ಕತ್ತರಿಸಿದ ದಪ್ಪ ಮೆಣಸಿನಕಾಯಿ ಹಾಕಿ ಚೆನ್ನಾಗಿ ಬೇಯಿಸಬೇಕು. ಅದು ಬೆಂದ ಮೇಲೆ ಅರ್ಧ ಒಳಾಗಿ ಮಾಡಿದ ಮಶ್ರೂಮ್ ಅನ್ನು ಹಾಕಿ ಡ್ರೈ ಆಗುವರೆಗೂ ಹುರಿಯಬೇಕು. ಕ್ರಮೇಣ ಅದಕ್ಕೆ ಗರಂ ಮಸಲಾ, ಸ್ಪಲ್ಪ ಚಿಲ್ಲಿಪುಡಿ, ಹಸಿಮೆಣಸಿನಕಾಯಿ ಹಾಕಿ ಐದು ನಿಮಿಷ ಬಿಸಿ ಮಾಡಿದರೆ ಕ್ಯಾಪ್ಸಿಕಂ ಮಶ್ರೂಮ್ ಮಸಲಾ ಸಿದ್ಧ. ತಟ್ಟೆಗೆ ಹಾಕಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಚಿಮುಕಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !