ಉಗ್ರರ ದಾಳಿಗೆ 42 ಸಾವು

7

ಉಗ್ರರ ದಾಳಿಗೆ 42 ಸಾವು

Published:
Updated:

ಬಮಾಕೊ: ಶಂಕಿತ ಇಸ್ಲಾಮಿಕ್ ಉಗ್ರರು ನಡೆಸಿದ ದಾಳಿಯಲ್ಲಿ 42 ಮಂದಿ ಮೃತಪಟ್ಟಿದ್ದಾರೆ. ಮಾಲಿಯಲ್ಲಿನ ಟುರೇಗ್‌ ಸಮುದಾಯದ ಅಲೆಮಾರಿ ಶಿಬಿರಗಳ ಸರಣಿ ದಾಳಿ ನಡೆಸಲಾಗಿದೆ ಎಂದು ಸ್ಥಳೀಯ ಮುಖಂಡರು ಗುರುವಾರ ತಿಳಿಸಿದ್ದಾರೆ.

‘ಪಶ್ಚಿಮ ಆಫ್ರಿಕಾ ದೇಶದ ಪೂರ್ವ ಮೆನಕಾ ಪ್ರಾಂತ್ಯದಲ್ಲಿ  ಮಂಗಳವಾರ ಮತ್ತು ಬುಧವಾರ ಈ ದಾಳಿಗಳನ್ನು ನಡೆಸಲಾಗಿದೆ’ ಎಂದು ಟುರೇಗ್‌ ಸಮುದಾಯದ ಸ್ವಯಂ ರಕ್ಷಣಾ ಅಧಿಕಾರಿ ಮೌಸ್ಸಾ ಅಗ್ ಅಚರ್‌ಟೌಮಾನೆ ಅವರು ತಿಳಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟವರಲ್ಲಿ ಎಂಟು ವರ್ಷದ ಮಕ್ಕಳೂ ಇದ್ದಾರೆ.

ಈ ಪ್ರಾಂತ್ಯದಲ್ಲಿ ಈಗಾಗಲೇ 100 ನಾಗರಿಕರು ಈ ವಾರದಲ್ಲಿ ನಡೆದ ಸರಣಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದೇ ಸೆಪ್ಟೆಂಬರ್‌ನಲ್ಲಿ ಬೈಕ್‌ನಲ್ಲಿ ಬರುವ ದಾಳಿಕೋರರ ಗುಂಪು ಮತ್ತೊಂದು ಅಲೆಮಾರಿಗಳ ಮೇಲೆ ಮಾಲಿಯ ಗಡಿಯಲ್ಲಿ ದಾಳಿ ನಡೆಸಿತ್ತು. ಇದರಲ್ಲಿ 12 ಮಂದಿ ನಾಗರಿಕರು ಮೃತಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !