ಸ್ವಾತಿ ಸ್ಟಾರ್

ಬುಧವಾರ, ಏಪ್ರಿಲ್ 24, 2019
33 °C

ಸ್ವಾತಿ ಸ್ಟಾರ್

Published:
Updated:
Prajavani

ಹನುಮಂತಿ ಮಂಡ್ಯದಲ್ಲಿ ಚುನಾವಣಾ ಕಣಕ್ಕಿಳಿಯಲು ಸಕಾರಣವಿತ್ತು. ಅವನೂ ಮಂಡ್ಯದ ಮಣ್ಣಲ್ಲಿ ಹುಟ್ಟಿ ಬೆಳೆದ ಅಸಲಿ ಮಗ. ಶಾಸ್ತ್ರ ಹೇಳೋರ ಮೇಲೆ ಶ್ಯಾನೆ ನಂಬಿಕೆ. ಮಂತ್ರಿಸಿದ ನಿಂಬೆಹಣ್ಣು ಸದಾ ಕಿಸೆಯಲ್ಲಿ.

ಸಿನಿಮಾದೋರು, ದೋಸ್ತಿ ಸರ್ಕಾರವೂ ಚುನಾವಣೆಗೆ ನಿಂತು ಮೀಸೆ ತಿರುವುವಾಗ ಒರಿಜಿನಲ್ ಸ್ಯಾಂಡ್‍ಸನ್, ‘ನಾನೂ ಒಂದು ಕೈ ನೋಡೋಮಾ’ ಅಂಬೋ ನಿರ್ಧಾರಕ್ಕೆ ಬಂದವನೇ ಬೋಗಾದಿ ಬೀದಿಯಾಗಿರೋ ಶ್ರೀ ರಾಮಾಂಜನೇಯಲು ಶಾಸ್ತ್ರಿತಾವ ಹೋಗಿ ಅಡ್ಡಬಿದ್ದ. ‘ಭಯಮೆಂದುಕು ಬಿಡ್ಡ. ಸ್ವಾತಿ ನಕ್ಷತ್ರದಲ್ಲಿ ಹುಟ್ಟಿರೋದ್ರಿಂದ ಎಂತಹ ಎದುರಾಳಿಗಳಿರಲಿ ಹುಟ್ಟಡಗಿಸ್ಬೋದು’ ಎಂದು ಭರವಸೆ
ಯಿತ್ತರು ಶಾಸ್ತ್ರಿಗಳು.

‘ಅಲ್ಸಾಮಿ, ಅಪೋಸಿಟ್ ಪಾರ್ಟಿ ಕೈಲಿ ಸರ್ಕಾರವದೆ. ಐ.ಟಿ ರೈಡ್ ಮಾಡ್‌ಸುದ್ರೆ? ಎಂದು’ ಅನುಮಾನಿಸಿದ. ‘ಇಂಟಿಲೋ ಏಮುಂದಿ? ಮುರಿದ ಟ್ರಂಕು ಹರಿದ ಹಚ್ಚಡ’ ನಕ್ಕರು ಶಾಸ್ತ್ರಿಗಳು. ‘ಯಾರಾರ ಆಗ್ದೋರು ಮಾಟಾ...?’ ಭಯಪಟ್ಟ. ‘ಸ್ವಾತಿಸ್ಟಾರ್ ಪವರಿದೆ. ಮಾಟ ಮಾಡಿಸಿದೋರಿಗೇ ರಿವರ್ಸ್ ಆಗ್ತದೆ’ ಶಾಸ್ತ್ರಿಗಳ ಭರವಸೆ. ‘ಮನಿ ಸ್ಪೆಂಡಿಂಗಂತೂ ಇದ್ದೇ ಇರ್ತದೆ. ಸೋತ್ರೆ ಗತಿ?’ ಹಲ್ಗಿಂಜಿದ ಹನುಮಂತಿ. ‘ಗೆದ್ರೂ ಪರವಾಕಿಲ್ಲ, ಸೋತ್ರೂ ಪರವಾಕಿಲ್ಲ. ಒಂದ್‌ ಕೈಯಲ್ಲಿ ಕಾಸು ಹಾಕಿ ಇನ್ನೊಂದ್ರಲ್ಲಿ ಕೋಟಿ ಎತ್ತಬೋದು’ ಆಶೀರ್ವದಿಸಿದ ಶಾಸ್ತ್ರಿಗಳು ಕಾಣಿಕೆ ಜೇಬಿಗಿಳಿಸಿದರು.

ಹನುಮಂತಿ ಗುಂಪು ಕಟ್ಟಿಕೊಂಡು ಕ್ಯಾನ್‌ವಾಸ್‌ಗೆ ಇಳಿದ. ದೋಸ್ತಿಗಳಾಗಿದ್ದ ಟಿ.ವಿ ಸೀರಿಯಲ್ ಸ್ಟಾರ್ಸ್ ಬಂದರು. ಮಹಿಳೆಯರ ಮನ ಗೆದ್ದರಾದರೂ ಜನ ಜಮಾಯಿಸಲಿಲ್ಲ. ಕೈನಾಗಿದ್ದ ನಾಕು ಕಾಸೂ ಪೋಸ್ಟರ್ಸ್, ಪಾಂಪ್ಲೆಟ್ಸ್, ಕ್ಯಾನ್‌ವಾಸ್ಗೇ ಸಾಲದಾದವು. ಹೆದರಿ ನಾಮಪತ್ರವನ್ನು ಹಿಂಪಡೆದವರೂ ಕಂಡರು. ಇಂವಾ ಹೆದರದೆ ಕಣದಲ್ಲುಳಿದ. ನಾಳೆಯೇ ಕೊನೆಯ ದಿನ. ರಾತ್ರಿ ಯಾರೋ ಬಾಗಿಲು ತಟ್ಟಿ ಒಳ ಬಂದು ದೊಡ್ಡ ಸೂಟ್‍ಕೇಸ್ ಇಟ್ಟು ಸಲಾಮ್ ಹೊಡೆದರು. ‘ನಾಳೆ ಗ್ಯಾರಂಟಿ ನಾಮಪತ್ರ ವಾಪಾಸ್ ಸಾ’ ಥಟ್ಟನೆ ಬಂದವರ ಹ್ಯಾಂಡ್ಲ್ ಹೊಡೆದ ಹನುಮಂತಿ. ಹೆಂಚುಗಳ ಮರೆಯಲ್ಲಿ ಮಿನುಗುವ ಸ್ವಾತಿ ಸ್ಟಾರ್ ಕಂಡಿತು!

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !