ಈಜುಕೊಳ, ಮಲ್ಟಿಜಿಮ್‌ ಯೋಜನೆ ರದ್ದುಕೋರಿ ಪಿಐಎಲ್‌

7

ಈಜುಕೊಳ, ಮಲ್ಟಿಜಿಮ್‌ ಯೋಜನೆ ರದ್ದುಕೋರಿ ಪಿಐಎಲ್‌

Published:
Updated:

ಬೆಂಗಳೂರು: ‘ರಾಜಾಜಿನಗರದ ಮರಿಯಪ್ಪ ಪಾಳ್ಯದ ಪಾರ್ಕ್ ಜಾಗದಲ್ಲಿನ ಈಜುಕೊಳ, ಮಲ್ಟಿ ಜಿಮ್‌ ಹಾಗೂ ಕ್ರೀಡಾ ಸಮುಚ್ಛಯ ನಿರ್ಮಾಣ ಯೋಜನೆ ರದ್ದುಪಡಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಪ್ರಕಾಶ್‌ನಗರದ ಜೆ.ಶ್ರೀನಿವಾಸನ್ ಸಲ್ಲಿಸಿರುವ ಈ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಈ ವಿಷಯದ ಬಗ್ಗೆ ಪಾಲಿಕೆಯಿಂದ ಮಾಹಿತಿ ಪಡೆದು ಸಲ್ಲಿಸಿ’ ಎಂದು ಪ್ರತಿವಾದಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರ ವಕೀಲರಿಗೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದೆ.

ಅರ್ಜಿದಾರರ ಮನವಿ ಏನು?: ‘ಅಧಿಸೂಚಿತ ಪಟ್ಟಿಯಲ್ಲಿರುವ ಪಾರ್ಕ್‌ಗಳಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಇದು ಕರ್ನಾಟಕ ಪಾರ್ಕ್, ಆಟದ ಮೈದಾನ ಮತ್ತು ಮುಕ್ತ ಪ್ರದೇಶಗಳ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ–1985ರ ಉಲ್ಲಂಘನೆ. ಆದ್ದರಿಂದ, ಕಟ್ಟಡ ನಿರ್ಮಾಣ ತಡೆಯಲು ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಅರ್ಜಿದಾರರ ಪರ ಜಿ.ಆರ್.ಮೋಹನ್‌ ವಕಾಲತ್ತು ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !