ಆರೋಪಿ ರಿಷಿ ವಕೀಲೆಯಾಗಿ ತಾಪ್ಸಿ ಪನ್ನು?

7
ಬಾಲಿವುಡ್‌

ಆರೋಪಿ ರಿಷಿ ವಕೀಲೆಯಾಗಿ ತಾಪ್ಸಿ ಪನ್ನು?

Published:
Updated:
ಮುಲ್ಕ್‌ ಚಿತ್ರದ ದೃಶ್ಯ ಹಾಗೂ ತಾಪ್ಸಿ ಪನ್ನು

ನಟಿ ತಾಪ್ಸಿ ಪನ್ನು ಹಾಗೂ ರಿಷಿ ಕಪೂರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮುಲ್ಕ್‌’ ಚಿತ್ರದ ಫಸ್ಟ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ತಾಪ್ಸಿ ಅವರು ಆರತಿ ಮೊಹಮ್ಮದ್‌ ಎಂಬ ವಕೀಲೆಯಾಗಿ ನಟಿಸಿದರೆ, ರಿಷಿ ಕಪೂರ್‌ ಮುರದ್‌ ಆಲಿ ಮೊಹಮ್ಮದ್‌ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ  ಆರೋಪಿ ಮುರದ್‌ ಆಲಿ ಮೊಹಮದ್‌ ಪರವಾಗಿ ಆರತಿ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಪೋಸ್ಟರ್‌ನಲ್ಲಿ ರಿಷಿಕಪೂರ್‌ ನೇರವಾಗಿ ಕ್ಯಾಮೆರಾವನ್ನೇ ದಿಟ್ಟಿಸುತ್ತಿದ್ದಾರೆ. ಅವರ ಬೆನ್ನಿನ ಮೇಲೆ ಇರುವ ಕೈ ತಾಪ್ಸಿ ಕೈ ಎನ್ನಲಾಗಿದೆ.

ಕೋರ್ಟ್‌ ಹಾಲ್‌ನಲ್ಲಿನ ಚಿತ್ರೀಕರಣದ ಚಿತ್ರವೊಂದನ್ನು ತಾಪ್ಸಿ ಟ್ವಿಟ್ಟರ್‌ನಲ್ಲಿ  ಮೇ ತಿಂಗಳಲ್ಲಿ ಹಂಚಿಕೊಂಡಿದ್ದರು. ಇದೂ ತಾಪ್ಸಿ ವಕೀಲೆ ಹಾಗೂ ರಿಷಿ ಆರೋಪಿ ಎಂಬುದಕ್ಕೆ ಸಾಕ್ಷಿಯಂತಿದೆ. ಪೋಸ್ಟರ್‌ನಲ್ಲಿರುವ ಚಿತ್ರ ‘ಪಿಂಕ್‌’ ಹಾಗೂ ‘ಜಾಲಿ ಎಲ್‌ಎಲ್‌ಬಿ’ ಚಿತ್ರಗಳನ್ನು ನೆನಪಿಸುತ್ತದೆ.

ಅನುಭವ್‌ ಸಿನ್ಹ ನಿರ್ದೇಶನದ ಈ ಚಿತ್ರದಲ್ಲಿ ಪ್ರತೀಕ್‌ ಬಬ್ಬರ್‌, ರಜತ್‌ ಕಪೂರ್, ಅಶುತೋಷ್‌ ರಾಣಾ, ಮನೋಜ್‌ ಪಹ್ವ, ನೀನಾ ಗುಪ್ತಾ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್‌ 3ಕ್ಕೆ ತೆರೆ ಕಾಣಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !