ಪ್ರಸಂಗಕರ್ತ ಅನಂತರಾಮ ಬಂಗಾಡಿ ಇನ್ನಿಲ್ಲ
ಯಕ್ಷಗಾನ ಪ್ರಸಂಗ ಕರ್ತರಾಗಿ, ಜ್ಯೋತಿಷಿಯಾಗಿ ಗುರುತಿಸಿಕೊಂಡಿದ್ದ ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ನಿವಾಸಿ ಅನಂತರಾಮ ಬಂಗಾಡಿ (68) ಅವರು ಭಾನುವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಪತ್ನಿ, ಮಗ, ಮಗಳು ಮತ್ತು ಮೊಮ್ಮಕ್ಕಳು ಇದ್ದಾರೆ.Last Updated 12 ಮೇ 2019, 20:15 IST