ಆರ್ಮಿ ಕ್ಯಾಪ್: ಐಸಿಸಿಯಿಂದ ಅನುಮತಿ ಪಡೆದಿದ್ದ ಭಾರತ
ರಾಂಚಿಯಲ್ಲಿ ಈಚೆಗೆ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಆರ್ಮಿ ಕ್ಯಾಪ್ ಧರಿಸಲು ಬಿಸಿಸಿಐ ಅನುಮತಿ ಪಡೆದಿತ್ತು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸ್ಪಷ್ಟಪಡಿಸಿದೆ.
ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ವಿರಾಟ್ ಕೊಹ್ಲಿ ಬಳಗವು ಆರ್ಮಿ ಕ್ಯಾಪ್ ಧರಿಸಿ ಪಂದ್ಯದಲ್ಲಿ ಆಡಿತ್ತು. ಆಟಗಾರರು ಆ ಪಂದ್ಯದ ಸಂಭಾವನೆಯನ್ನೂ ಭಾರತೀಯ ರಕ್ಷಣಾ ನಿಧಿಗೆ ದೇಣಿಗೆ ನೀಡಿತ್ತು.Last Updated 11 ಮಾರ್ಚ್ 2019, 14:32 IST