ಕುಂಭ ಮೆರವಣಿಗೆಗೆ ಕಪ್ಪುಪಟ್ಟಿ ವಿರೋಧ: ಪೊಲೀಸರ ಸಂಧಾನ!
ಪ್ರಗತಿರರ ವಿರೋಧದ ನಡುವೆಯೂ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು.
ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪೂರ್ಣಕುಂಭ ಮೆರವಣಿಗೆ ವಿರೋಧಿಸಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ ಅವರಿಗೆ ಪತ್ರ ಬರೆದು, ಪೂರ್ಣಕುಂಭ ಮೆರವಣಿಗೆ ಕೈಬಿಡಬೇಕೆಂದು ಕೋರಿತ್ತು.Last Updated 4 ಜನವರಿ 2019, 20:23 IST