ಹಾಸ್ಯನಟ ‘ಕ್ರೇಜಿ’ ಮೋಹನ್ ನಿಧನ
ನಾಟಕ ಬರಹಗಾರ, ಚಿತ್ರ ಕಥೆಗಾರ ಹಾಗೂ ಹಾಸ್ಯ ನಟ ‘ಕ್ರೇಜಿ’ ಮೋಹನ್ (66) ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೃದಯಾಘಾತವಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಂಗಭೂಮಿಯಲ್ಲಿ ಜನಪ್ರಿಯರಾಗಿದ್ದ ಮೋಹನ್, ನಂತರ ಸಿನಿಮಾ ಕ್ಷೇತ್ರ ಪ್ರವೇಶಿಸಿದರು. ಕಮಲ್ ಹಾಸನ್ ನಟನೆಯ ‘ಅವೈ ಷಣ್ಮುಗಿ’, ‘ವಸೂಲಿ ರಾಜಾ ಎಂಬಿಬಿಎಸ್’, ‘ಮೈಕೇಲ್ ಮದನ ಕಾಮರಾಜನ್’ ಸೇರಿದಂತೆ ಹಲವು ಸೂಪರ್ ಹಿಟ್ ಚಲನಚಿತ್ರಗಳಿಗೆ ಕಥೆ ಬರೆದಿದ್ದಾರೆ.
ಮೃತರಿಗೆ ಪತ್ನಿ ಮತ್ತು ಮಗ ಇದ್ದಾರೆ.
Last Updated 10 ಜೂನ್ 2019, 20:15 IST