ಭೌಗೋಳಿಕ ಸೂಚಿಕೆ ಪಡೆದ ಉತ್ಪನ್ನಮಾರಾಟಕ್ಕೆ ಪ್ರತ್ಯೇಕ ನೀತಿ ಚಿಂತನೆ
‘ದೇಶದಲ್ಲಿ ಅತಿ ಹೆಚ್ಚು ಉತ್ಪನ್ನಗಳಿಗೆ ಭೌಗೋಳಿಕ ಸೂಚಿಕೆ (ಜಿಐ) ಪಡೆದಿರುವ ಕರ್ನಾಟಕದಲ್ಲಿ ಈ ಉತ್ಪನ್ನಗಳ ಮಾರುಕಟ್ಟೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತ್ಯೇಕ ನೀತಿ ರೂಪಿಸಲಾಗುವುದು. ಈ ಮೂಲಕ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಯೂ ಕರ್ನಾಟಕಕ್ಕೆ ಸಲ್ಲಲಿದೆ’ ಎಂದು ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಷನ್ ಸೆಂಟರ್ನ (ವಿಟಿಪಿಸಿ) ವ್ಯವಸ್ಥಾಪಕ ನಿರ್ದೇಶಕ ಎಸ್. ಆರ್. ಸತೀಶ ಹೇಳಿದರು.Last Updated 3 ಮೇ 2019, 20:24 IST