ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manoj Prabhakar

ADVERTISEMENT

ಮನೋಜ್ ಪ್ರಭಾಕರ್ ವಿರುದ್ಧ ದೂರು

ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಮತ್ತು ಅವರ ಪತ್ನಿಯ ವಿರುದ್ಧ ವಂಚನೆ ಪ್ರಕರಣವನ್ನು ದೆಹಲಿ ಪೊಲೀಸರು ದಾಖಲಿಸಿಕೊಂಡಿದ್ಧಾರೆ. ಮನೆ ಮಾರಾಟದ ವಿವಾದಕ್ಕೆ ಸಂಬಂಧಿಸಿದಂತೆ ಲಂಡನ್‌ನಲ್ಲಿರುವ ಸಂಧ್ಯಾ ಶರ್ಮಾ ಪಂಡಿತ್ ಎಂಬುವವರು ದೂರು ದಾಖಲಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ‘ದಕ್ಷಿಣ ದೆಹಲಿಯ ಸರ್ವಪ್ರಿಯಾ ವಿಹಾರ್‌ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿ ನಮ್ಮ ಮನೆಯಿದೆ. ಮೊದಲ ಮಹಡಿಯಲ್ಲಿ ಮನೋಜ್ ಮನೆಯಿದೆ. ನಾವು ಲಂಡನ್‌ನಲ್ಲಿರುವುದರಿಂದ ನಮ್ಮ ಮನೆಗೆ ಬೀಗ ಹಾಕಿದ್ದೆವು. ಆದರೆ ಅದನ್ನು ಒಡೆದು ಬೇರೊಬ್ಬರಿಗೆ ಮನೋಜ್ ಅವರು ಬಾಡಿಗೆ ಕೊಟ್ಟಿದ್ಧಾರೆ’ ಎಂದು ಸಂಧ್ಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Last Updated 18 ಅಕ್ಟೋಬರ್ 2019, 18:25 IST
ಮನೋಜ್ ಪ್ರಭಾಕರ್ ವಿರುದ್ಧ ದೂರು
ADVERTISEMENT
ADVERTISEMENT
ADVERTISEMENT
ADVERTISEMENT