ಇಂದಿನಿಂದ ಎಲ್ಐಸಿ ಹೌಸಿಂಗ್ ಫೈನಾನ್ಸ್ ‘ನಿಮ್ಮ ಮನೆ’ ಮೇಳ
ಈ ಮೇಳದಲ್ಲಿ ರಿಯಲ್ ಎಸ್ಟೇಟ್ ವಲಯದ 42ಕ್ಕೂ ಹೆಚ್ಚು ಪ್ರತಿಷ್ಠಿತ ಗೃಹ ನಿರ್ಮಾಣ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. 100ಕ್ಕೂ ಹೆಚ್ಚು ಯೋಜನೆಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಎಲ್ಐಸಿ ಎಚ್ಎಫ್ಎಲ್ನ ಆಡಳಿತ ನಿರ್ದೇಶಕ ವಿನಯ್ ಶಾ ಶುಕ್ರವಾರ ಸಂಜೆ 5 ಗಂಟೆಗೆ ಮೇಳ ಉದ್ಘಾಟಿಸುವರು. ಈ ಪ್ರದರ್ಶನದಲ್ಲಿ ವಿಸ್ತೃತ ಶ್ರೇಣಿಯ ನಿವೇಶನಗಳು, ಫ್ಲ್ಯಾಟ್ಗಳು, ವಿಲ್ಲಾ ಯೋಜನೆಗಳು ಕೈಗೆಟುವ ದರದ ಮತ್ತು ಐಷಾರಾಮಿ ಶ್ರೇಣಿಯಲ್ಲಿ ಪ್ರದರ್ಶನಕ್ಕೆ ಇರಲಿವೆ.Last Updated 21 ಜೂನ್ 2018, 17:15 IST