ಹಾಂಗ್‌ಝೌ : ಭಾರತ ಮಹಿಳೆಯರ ಹ್ಯಾಂಡ್‌ಬಾಲ್ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಸೋಮವಾರ ‘ಬಿ’ ಗುಂಪಿನ ಆರಂಭಿಕ ಪಂದ್ಯದಲ್ಲಿ 13–41 ಗೋಲುಗಳಿಂದ ಜಪಾನ್ ತಂಡದ ಎದುರು ಮುಗ್ಗರಿಸಿತು.
ಮೆನಿಕಾ ಅವರು ನಾಲ್ಕನೇ ನಿಮಿಷದಲ್ಲಿ ಗೋಲು ದಾಖಲಿಸಿ ಭಾರತ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ, ಅದಾದ ಕೆಲವೇ ನಿಮಿಷದಲ್ಲಿ ಜಪಾನ್ ಆಟಗಾರ್ತಿಯರು ಪಾರಮ್ಯ ಸಾಧಿಸಿದರು. ಮಧ್ಯಂತರದ ವೇಳೆಗೆ ಜಪಾನ್ ತಂಡ 21–4ರ ಮುನ್ನಡೆ ಸಾಧಿಸಿತು.
ಜಪಾನ್ ಪರ ಎಸ್. ಇಶಿಕಾವಾ ಏಳು ಗೋಲು ಗಳಿಸಿ ಮಿಂಚಿದರು. ಭಾರತದ ಪರ ಮೆನಿಕಾ ನಾಲ್ಕು ಗೋಲು ತಂದಿತ್ತರೆ, ಪ್ರಿಯಾಂಕ್ ಮತ್ತು ಪಿ. ಠಾಕೂರ್ ತಲಾ ಮೂರು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಬುಧವಾರ ಭಾರತ ತಂಡವು ಹಾಂಗ್‌ಕಾಂಗ್ ತಂಡವನ್ನು ಎದುರಿಸಲಿದೆ. ಜಪಾನ್ ತಂಡವು ನೇಪಾಳದ ವಿರುದ್ಧ ಸೆಣಸಲಿದೆ. ಆತಿಥೇಯ ಚೀನಾ ಗುಂಪಿನಲ್ಲಿರುವ ಮತ್ತೊಂದು ತಂಡವಾಗಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್ ಪ್ರವೇಶ ಪಡೆಯಲಿವೆ.