ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವೆಲಿನ್ ಥ್ರೋ, ಶಾಟ್‌ಪಟ್‌ನಲ್ಲಿ ಕೂಟ ದಾಖಲೆ

ರಾಜ್ಯ ಜೂನಿಯರ್‌, ಯೂಥ್ ಅಥ್ಲೆಟಿಕ್ ಕೂಟ: ಸಾಧನೆ ಉತ್ತಮಪಡಿಸಿಕೊಂಡ ವೈಭವ್‌, ಶಿವಾಜಿ
Published 28 ಸೆಪ್ಟೆಂಬರ್ 2023, 16:10 IST
Last Updated 28 ಸೆಪ್ಟೆಂಬರ್ 2023, 16:10 IST
ಅಕ್ಷರ ಗಾತ್ರ

ಮಂಗಳೂರು: ಜಿಟಿ ಜಿಟಿ ಮಳೆಯ ನಡುವೆಯೇ ಬೆಳಗ್ಗಿನ ಹದವಾದ ಚಳಿಯ ವಾತಾವರಣಕ್ಕೆ ಅಮೋಘ ಓಟದ ಮೂಲಕ ರಂಗು ತುಂಬಿದ ಯಾದಗಿರಿಯ ವೈಭವ್ ಮಾರುತಿ ಪಾಟೀಲ 10 ಸಾವಿರ ಮೀಟರ್ಸ್ ಓಟದಲ್ಲಿ ತಮ್ಮದೇ ದಾಖಲೆ ಮುರಿದು ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ರಾಜ್ಯ ಮತ್ತು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಗಳು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಜೂನಿಯರ್ ಮತ್ತು ಯೂಥ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 23 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ವೈಭವ್‌ ದಾಖಲೆಯ ಬೆನ್ನಲ್ಲೇ 20 ವರ್ಷದೊಳಗಿನ ಪುರುಷರ 10 ಸಾವಿರ ಮೀಟರ್ಸ್ ಓಟದಲ್ಲಿ ಹಾವೇರಿಯ ಶಿವಾಜಿ ಪರಶುರಾಮ್‌ ಕೂಡ ತಮ್ಮದೇ ದಾಖಲೆ ಮುರಿದರು. 16 ವರ್ಷದೊಳಗಿನ ಬಾಲಕರ ಷಾಟ್‌ಪಟ್‌ನಲ್ಲಿ ಉಡುಪಿಯ ಅನುರಾಗ್‌ ಜಿ, 20 ವರ್ಷದೊಳಗಿನ ಪುರುಷರ ಜಾವೆಲಿನ್ ಥ್ರೋದಲ್ಲಿ ಬೆಳಗಾವಿಯ ಶಶಾಂಕ್ ಪಾಟೀಲ್‌ ದಾಖಲೆ ಬರೆದರು.

ಮೊಗವೀರ ವ್ಯವಸ್ಥಾಪನ ಮಂಡಳಿ ಮತ್ತು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ, ಲೋಕನಾಥ ಬೋಳಾರ್ ಸ್ಮರಣಾರ್ಥ ಕ್ರೀಡಾಕೂಟವನ್ನು ಪ್ರಾಯೋಜಿಸಿದೆ.

ಎರಡನೇ ದಿನದ ಫಲಿತಾಂಶಗಳು (ಚಿನ್ನ ಮಾತ್ರ): ಪುರುಷರ ವಿಭಾಗ: 23 ವರ್ಷದೊಳಗಿನವರು: 100 ಮೀ: ಶಶಾಂಕ್ ವಿರೂಪಾಕ್ಷಪ್ಪ ಅಂಗಡಿ (ಹಾವೇರಿ) ಕಾಲ:10.71 ಸೆ; 10000 ಮೀ: ವೈಭವ್ ಮಾರುತಿ ಪಾಟೀಲ (ಯಾದಗಿರಿ) ಕಾಲ: 32 ನಿ, 17 ಸೆ (ಕೂಟ ದಾಖಲೆ; ಹಿಂದಿನ ದಾಖಲೆ: ವೈಭವ್‌ ಮಾರುತಿ ಪಾಟೀಲ: 32ನಿ 39 ಸೆ); ಟ್ರಿಪಲ್ ಜಂಪ್‌: ಜಾಫರ್ ಖಾನ್ ಮೊಹಮ್ಮದ್ (ಬೆಳಗಾವಿ) ಅಂತರ: 14.59 ಮೀ; ಷಾಟ್‌ಪಟ್: ರಾಹುಲ್ ಕಶ್ಯಪ್ (ಮೈಸೂರು) ದೂರ: 16.23 ಮೀ,; ಜಾವೆಲಿನ್ ಥ್ರೋ: ಅಭಿನಂದನ್ ಎಸ್‌ (ಉತ್ತರ ಕನ್ನಡ) ದೂರ: 56.28 ಮೀ. 20 ವರ್ಷದೊಳಗಿನವರ 100 ಮೀ: ಆರ್ಯನ್ ಮನೋಜ್‌ (ಬೆಂಗಳೂರು) ಕಾಲ: 10.84 ಸೆ,; 10000 ಮೀ: ಶಿವಾಜಿ ಪರಶುರಾಮ್‌ (ಹಾವೇರಿ) ಕಾಲ: 30 ನಿ, 34.90 ಸೆ (ಕೂಟ ದಾಖಲೆ; ಹಳೆಯ ದಾಖಲೆ: ಶಿವಾಜಿ ಪರಶುರಾಮ್‌: 31ನಿ 34.3ಸೆ); ಹೈಜಂಪ್‌: ಸುದೀಪ್ (ಶಿವಮೊಗ್ಗ) ಎತ್ತರ: 1.90 ಮೀ; ಟ್ರಿಪಲ್ ಜಂಪ್‌: ಪವನ್ ಶೇಖರ್‌ (ಮೈಸೂರು) ಅಂತರ: 13.89 ಮೀ; ಷಾಟ್‌ಪಟ್‌: ಮೌರ್ಯ ಗಣಪತಿ (ಮೈಸೂರು) ದೂರ: 15.53 ಮೀ; ಜಾವೆಲಿನ್ ಥ್ರೋ: ಶಶಾಂಕ್ ಪಾಟೀಲ (ಬೆಳಗಾವಿ) ದೂರ: 70.2 ಮೀ (ಕೂಟ ದಾಖಲೆ. ಹಳೆಯ ದಾಖಲೆ: ಮನು ಡಿ.ಪಿ.: ದೂರ: 66.82 ಮೀ); ಬಾಲಕರು: 18 ವರ್ಷದೊಳಗಿನವರು: 100 ಮೀ: ಮುತ್ತಣ್ಣ ಕೆ.ವೈ (ಶಿವಮೊಗ್ಗ) ಕಾಲ: 11.10,; 3000 ಮೀ: ಖುಷಿ ಸಾಲಿಯಾನ್ (ದ.ಕ.) ಕಾಲ: 9ನಿ 22.71ಸೆ; ಹೈಜಂಪ್‌: ಆದರ್ಶ್ ಶೆಟ್ಟಿ (ದ.ಕ.) ಎತ್ತರ: 1.85 ಮೀ; ಟ್ರಿ‍ಪಲ್ ಜಂಪ್‌: ಪುನೀತ್ ಎಸ್. (ಕೊಡಗು) ಅಂತರ: 13.44ಮೀ,; ಷಾಟ್‌ಪಟ್‌: ಆಕಾಶ್ ಸುಂದರ್ (ದ.ಕ.) ದೂರ: 15.86 ಮೀ; ಜಾವೆಲಿನ್ ಥ್ರೋ: ಕುಲದೀಪ್ ಕುಮಾರ್ (ಉಡುಪಿ) ದೂರ: 52.99 ಮೀ; 16 ವರ್ಷದೊಳಗಿನವರು: 100 ಮೀ: ಸಾವಿನ್ ತಿಂಗಳಾಯ (ಉಡುಪಿ) ಕಾಲ: 11.21 ಸೆ.; ಶಾಟ್‌ಪಟ್‌: ಅನುರಾಗ್ ಜಿ. (ಉಡುಪಿ) ದೂರ: 16.86 ಮೀ. (ಕೂಟ ದಾಖಲೆ. ಹಳೆಯ ದಾಖಲೆ: ಗಣೇಶ್ ಎಚ್‌.ನಾಯಕ್: 15.68 ಮೀ).

ಮಹಿಳಾ ವಿಭಾಗ: 23 ವರ್ಷದೊಳಗಿನವರು: 100 ಮೀ. ಕೀರ್ತನಾ ಎಸ್‌ (ಉಡುಪಿ) ಕಾಲ: 12.22 ಸೆ; 10000 ಮೀ: ನಾಗಶ್ರೀ ಎಚ್‌.ಎನ್‌ (ಶಿವಮೊಗ್ಗ) ಕಾಲ: 42ನಿ 52.30 ಸೆ; ಜಾವೆಲಿನ್ ಥ್ರೋ: ಶ್ರಾವ್ಯ (ಉಡುಪಿ) ದೂರ: 39.8 ಮೀ; 20 ವರ್ಷದೊಳಗಿನವರು: 100 ಮೀ: ನೊಯೆಲಿ ಅನಾ ಕೋರ್ನೆಲಿ (ಬೆಂಗಳೂರು) ಕಾಲ: 11.94 ಸೆ,; 3000 ಮೀ: ಆರಾಧನಾ (ಬೆಂಗಳೂರು) ಕಾಲ: 9 ನಿ 54.81 ಸೆ; ಹೈಜಂಪ್‌: ಪವನಾ ನಾಗರಾಜ್ (ಶಿವಮೊಗ್ಗ) ಎತ್ತರ: 1.65 ಮೀ; ಟ್ರಿಪಲ್ ಜಂಪ್‌: ಭೂಮಿಕಾ ಕೆ.ಎನ್‌. (ಶಿವಮೊಗ್ಗ) ಅಂತರ: 11.66 ಮೀ; ಶಾಟ್‌ಪಟ್‌: ಬೃಂದಾ ಎಸ್‌.ಗೌಡ (ಮೈಸೂರು) ದೂರ: 13.5; ಜಾವೆಲಿನ್ ಥ್ರೋ: ರಮ್ಯಶ್ರೀ ಜೈನ್ (ದ.ಕ.) ದೂರ: 40.63 ಮೀ; ಬಾಲಕಿಯರು: 18 ವರ್ಷದೊಳಗಿನವರು: 100 ಮೀ: ಸ್ತುತಿ ಶೆಟ್ಟಿ (ಉಡುಪಿ) ಕಾಲ: 12.62 ಸೆ; 3000 ಮೀ: ಪ್ರಣತಿ (ಬೆಂಗಳೂರು) ಕಾಲ: 10ನಿ 37.50 ಸೆ.; ಹೈಜಂಪ್‌: ಗೌತಮಿ (ಶಿವಮೊಗ್ಗ) ಎತ್ತರ: 1.63 ಮೀ.; ಟ್ರಿಪಲ್ ಜಂಪ್‌: ಅದಿತಿ ವಿನಾಯಕ್‌ (ಬೆಳಗಾವಿ) ಅಂತರ: 10.26ಮೀ; ಷಾಟ್‌ಪಟ್‌: ಐಶ್ವರ್ಯಾ ಬೆಂಡಿಗೇರಿ (ದ.ಕ.) ದೂರ: 11.9 ಮೀ.; ಜಾವೆಲಿನ್ ಥ್ರೋ: ದಿಶಾ ನೆಲ್ವಾಡೆ (ಬೀದರ್‌) ದೂರ: 39.97 ಮೀ.; 16 ವರ್ಷದೊಳಗಿನವರು: 100 ಮೀ: ಸಿರಿ ಎನ್‌ (ರಾಮನಗರ) ಕಾಲ: 13.26 ಸೆ; ಹೈಜಂಪ್‌: ಹರ್ಷಿತಾ ಪಿ (ಬೆಂಗಳೂರು) ಎತ್ತರ: 1.44 ಮೀ; ಷಾಟ್‌ಪಟ್‌: ಶ್ರೀಮಾಯಿ ಕುಲಕರ್ಣಿ (ಬೆಂಗಳೂರು) ದೂರ: 10.50 ಮೀ; ಜಾವೆಲಿನ್ ಥ್ರೋ: ಅಹರ್ನಿಶಿ (ಬೆಂಗಳೂರು) ದೂರ: 22.37 ಮೀ.

[object Object]
ಜಾವೆಲಿನ್ ಥ್ರೋದಲ್ಲಿ ದಾಖಲೆ ಮಾಡಿದ ಶಶಾಂಕ್ ಪಾಟೀಲ –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT