ವರಟೆ ಹಕ್ಕಿಗಳ ಮೋಹಕ ಹಾರಾಟ...
ಇವುಗಳನ್ನು ನೋಡಿದ ಯಾರೇ ಆದರೂ ಇವು ಬಾತುಕೋಳಿ ಎಂದು ಹೇಳುವುದು ಸಹಜ. ಆದರೆ ಇವು ಬಾತುಕೋಳಿಯ ವಂಶದವು ಅಷ್ಟೆ. ವರಟೆ, ಚುಕ್ಕಿಬಾತು ಹಾಗೂ ಇಂಡಿಯನ್ ಸ್ಪಾಟ್ ಬಿಲ್ಡ್ ಡಕ್ (Indian Spot Billed Duck) ಎಂದು ಕರೆಯಲಾಗುವ ಇವಕ್ಕೆ ಗಿಡ್ಡನೆಯ, ಕೇಸರಿ ಬಣ್ಣದ ಜಾಲಪಾದಗಳು, ನೀಳ ಚಪ್ಪಟೆ ಕೊಕ್ಕು ಇದೆ. ಕೊಕ್ಕಿನ ಮೇಲೆ ಹಳದಿ ಮತ್ತು ಕಪ್ಪು, ಮೂಗಿನ ಹೊಳ್ಳೆಗಳ ಮೇಲೆ ಕೇಸರಿ, ಕಣ್ಣಿನ ಸುತ್ತ ಕಾಡಿಗೆ ಲೇಪಿಸಿದಂತೆ ಕಾಣುವ ಕಣ್ಣುಗಳು ಆಕರ್ಷಿಸುತ್ತವೆ.Last Updated 1 ಸೆಪ್ಟೆಂಬರ್ 2018, 9:35 IST