ತಹಶೀಲ್ದಾರ್‌ಗೆ ಬಿಜೆಪಿ ಕಾರ್ಪೊರೇಟರ್‌ ಧಮಕಿ ?

7
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷನಿಂದ ಸರ್ಕಾರಿ ಕಚೇರಿಯಲ್ಲೇ ಕೂಗಾಟ

ತಹಶೀಲ್ದಾರ್‌ಗೆ ಬಿಜೆಪಿ ಕಾರ್ಪೊರೇಟರ್‌ ಧಮಕಿ ?

Published:
Updated:

ವಿಜಯಪುರ: ಭೂ ಪರಿವರ್ತನೆಯ ಕಡತವೊಂದರ ವಿಷಯಕ್ಕೆ ಸಂಬಂಧಿಸಿದಂತೆ ವಿಜಯಪುರ ತಹಶೀಲ್ದಾರ್ ರವಿಚಂದ್ರ ಅವರಿಗೆ, ಕಚೇರಿಯಲ್ಲೇ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ರವೀಂದ್ರ ಲೋಣಿ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮಯ್ಯ ಗಣಾಚಾರಿ ಧಮಕಿ ಹಾಕಿರುವ 2 ನಿಮಿಷದ ವಿಡಿಯೊ ಕ್ಲಿಪ್ಪಿಂಗ್‌ ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ‘ಪ್ರಜಾವಾಣಿ’ ತಹಶೀಲ್ದಾರ್‌ ಸಂಪರ್ಕಿಸಲು ಯತ್ನಿಸಿದರೂ; ಲಭ್ಯವಾಗಲಿಲ್ಲ.

ದುಡ್ಡು ಕೊಡದಿದ್ದಕ್ಕೆ ಈ ರಂಪಾಟ

‘ಬಬಲೇಶ್ವರ ತಾಲ್ಲೂಕಿನ ಜಮೀನೊಂದಕ್ಕೆ ಸಂಬಂಧಿಸಿದಂತೆ ನಡೆದ ಘಟನೆಯಿದು. ಜಮೀನಿನ ಭೂ ಪರಿವರ್ತನೆಗೆ ನಿಯಮಾವಳಿಯಂತೆ ಎಲ್ಲಾ ದಾಖಲಾತಿ ನೀಡಲಾಗಿತ್ತು. ಈ ಹಿಂದಿನ ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ನಗರ ಯೋಜನಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿದ್ದರು.

ಈ ಕಡತ ಜಿಲ್ಲಾಧಿಕಾರಿ ಕಚೇರಿಗೆ ಬಂದಿತ್ತು. ಎರಡ್ಮೂರು ದಾಖಲೆ ಇಲ್ಲಾ ಎಂದು ಮತ್ತೆ ತಹಶೀಲ್ದಾರ್‌ ಕಚೇರಿಗೆ ಮರಳಿತ್ತು. ಈ ವಿಷಯವಾಗಿ ನೋಟಿಸ್‌ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಜತೆ ನೇರವಾಗಿ ಚರ್ಚಿಸಿದ್ದೆ. ಅವರ ಸೂಚನೆಯಂತೆ ತಹಶೀಲ್ದಾರ್‌ ಕಚೇರಿಗೆ ತೆರಳಿದ್ದೆ.

ಈ ಸಂದರ್ಭ ಕಡತ ವಿಲೇವಾರಿಗೆ ಮೀನ–ಮೇಷ ಎಣಿಸಿದರು. ನಾನು ಎಂದೂ ದುಡ್ಡು ಪಡೆದವನೂ ಅಲ್ಲ. ಕೊಟ್ಟವನೂ ಅಲ್ಲ. ಈ ಸಂಬಂಧ ಮಾತನಾಡುತ್ತಿದ್ದೆ. ನನ್ನ ಜತೆಯಲ್ಲಿದ್ದ ಸೋಮಯ್ಯ ಗಣಾಚಾರಿ ಇದೇ ಸಂದರ್ಭ ವೃದ್ಧರ ಜಮೀನಿಗೆ ತಡೆಯಾಜ್ಞೆ ನೀಡಿದ ಕುರಿತು ಜೋರು ಧ್ವನಿಯಲ್ಲಿ ಪ್ರಶ್ನಿಸಿದರು. ಇದನ್ನೇ ತಹಶೀಲ್ದಾರ್‌ ಕಚೇರಿಯ ಕೆಲ ಸಿಬ್ಬಂದಿ ವಿಡಿಯೊ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ’ ಎಂದು ಬಿಜೆಪಿ ಸದಸ್ಯ ರವೀಂದ್ರ ಲೋಣಿ ‘ಪ್ರಜಾವಾಣಿ’ಗೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !