ಜಪಾನ್ ಶೈಲಿಯ ಊಟಕ್ಕೆ ‘ಟಾಯ್‌ಕಿ’

7

ಜಪಾನ್ ಶೈಲಿಯ ಊಟಕ್ಕೆ ‘ಟಾಯ್‌ಕಿ’

Published:
Updated:
Prajavani

ಚೀನಾ ಶೈಲಿಯ ಖಾದ್ಯಗಳನ್ನು ತಿನ್ನುವ ಮನಸ್ಸಾಗಿದ್ದರೆ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಸಾಕಷ್ಟು ರೆಸ್ಟೊರೆಂಟ್‌ಗಳು ಸಿಗುತ್ತವೆ. ಆದರೆ ಜಪಾನ್‌ ಶೈಲಿಯ ರುಚಿಗೆ ನಾವು ಹುಡುಕಿಕೊಂಡು ಹೋಗಬೇಕು.

ಇದನ್ನು ಕಂಡುಕೊಂಡ ಅಪೇಕ್ಷಾ ಅವರು ಅಪ್ಪಟ ಕನ್ನಡತಿಯಾದರೂ ಜಪಾನ್‌ನ ಆಹಾರದ ಮೂಲಗಳನ್ನು ತಿಳಿದುಕೊಂಡು ಅಲ್ಲಿಯ ಶೈಲಿಯ ರೆಸ್ಟೊರೆಂಟ್‌ ಆರಂಭಿಸಿದರು. ಇಂದಿರಾನಗರದಲ್ಲಿ ಸಾಕಷ್ಟು ಜಪಾನೀಯರು ಇದ್ದಾರೆ. ಅವರು ಊಟಕ್ಕಾಗಿ ಕೋರಮಂಗಲ ಸೇರಿದಂತೆ ಬೇರೆ ಕಡೆ ಹೋಗುತ್ತಿದ್ದರು. ಅವರನ್ನು ಈಗ ‘ಟಾಯ್‌ಕಿ’ ಆಕರ್ಷಿಸುತ್ತಿದೆ. 

ವಾರಾಂತ್ಯದಲ್ಲಿ ಗಿಜಿಗುಡುವ ಟಾಯ್‌ಕಿ, ಅಪ್ಪಟ ಜಪಾನಿನ ಖಾದ್ಯಗಳನ್ನು ಪರಿಚಯಿಸಿದೆ. ಅಲ್ಲಿಯದೇ ಶೈಲಿಯ ಪಾನೀಯ, ಅದೇ ರೀತಿಯ ಅಡುಗೆಗಳನ್ನು ಮಾಡುವ ದೆಹಲಿ ಶೆಫ್‌ ಈ ರೆಸ್ಟೋರೆಂಟ್‌ನ ಆಕರ್ಷಣೆ. 

‘ನಮ್ಮ ಮನೆಯಲ್ಲಿ ಎಲ್ಲರೂ ತಿಂಡಿ ಪ್ರಿಯರು. ನಾನು ಯಾವಾಗಲೂ ತಿಂಡಿಗಳನ್ನು ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದೆ. ಒಬ್ಬಳೇ ಒಂದು ರೆಸ್ಟೊರೆಂಟ್ ಆರಂಭಿಸೋಕೆ ಕಷ್ಟ. ಅಣ್ಣನ ಸಹಾಯ ಪಡೆದುಕೊಂಡೆ. ಲಂಡನ್‌ನಲ್ಲಿ ಇದ್ದರೂ ಆಗಾಗ ಬಂದು ಹೋಗುತ್ತಾನೆ. ಎರಡು ತಿಂಗಳಿನ ಹಿಂದೆ ನನ್ನ ಕನಸಿನ ರೆಸ್ಟೊರೆಂಟ್ ಆರಂಭವಾಯಿತು. ಈಗ ಅದು ಜನಾಕರ್ಷಣೆ ಪಡೆಯುತ್ತಿದೆ’ ಎಂದು ಮಾಲೀಕರಾದ ಅಪೇಕ್ಷಾ ಹೇಳಿದರು.

‘ಇಲ್ಲಿಗೆ ಬರುವವರು ಬಹುತೇಕರು ಡ್ರಿಂಕ್ಸ್ ಕೇಳುತ್ತಾರೆ. ನಾವು ಅದನ್ನು ಇನ್ನೂ ಪರಿಚಯಿಸಿಲ್ಲ. ಅವರಿಗೆ ಬೇಕಾದ್ದು ಸಿಗದೇ ಇದ್ದಾಗ ವಾಪಸ್‌ ಹೋಗುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ವೈನ್‌ ಪರಿಚಯಿಸಲಿದ್ದೇವೆ’ ಎಂದು ಅವರು ಅನುಭವ ಹಂಚಿಕೊಂಡರು.

‘ಮಹಿಳೆಯಾಗಿ ನಾನು ಎಷ್ಟೆಲ್ಲಾ ಜವಾಬ್ದಾರಿ ಹೊತ್ತುಕೊಳ್ಳಬಲ್ಲೆ ಎಂದು ಆರಂಭದಲ್ಲಿ ಅನ್ನಿಸಿತ್ತು. ಆದರೆ ಈಗ ಹೋಟೆಲ್‌ನ ಕೆಲಸಗಾರರನ್ನು ನಿರ್ವಹಿಸುವುದರಿಂದ ಹಿಡಿದು ಎಲ್ಲಾ ಜವಾಬ್ದಾರಿ ನನ್ನದೇ. ಪತಿಯ ಬೆಂಬಲವೂ ಸಿಕ್ಕಿದೆ’ ಎಂದರು. 

ಟಾಯ್‌ಕಿ ಖಾದ್ಯಗಳ ವಿಶೇಷ

ಕಟ್ಸರು ಕರಿ ಚಿಕನ್‌, ಜಾಸ್ಮಿನ್‌ ರೈಸ್‌, ಪಾನ್‌ ಫ್ರೈಡ್‌ ರೈಸ್‌, ಕ್ಯಾರೆಟ್ ಆ್ಯಂಡ್‌ ಡೈಕಾನ್‌ ನಮಸು, ಒಶಿಂಕು ಒರ್ಡೆ ಮಮ್ಕಿಯನ್ನು ಟೋಕಿಯೊ ಬೆಂಟೊದಲ್ಲಿ ತಿನ್ನಬಹುದು, ಹಾಗೆಯೇ ಸಾಯಿಲ್ ಬೆಂಟೊ, ಬ್ಯಾಂಕಾಕ್‌ ಬೆಂಟೊ, ನ್ಯೂಯಾರ್ಕ್‌ ಬೆಂಟೊ, ಸ್ಪೆಶಲ್‌ ಶ್ರಿಂಪ್‌ ಬೆಂಟೊ, ಸೂಶಿ ಗಿಂಬಾಪ್‌ ಬೆಂಟೊ ಸಿಗಲಿದೆ. ಹೊಸದಾಗಿ ಬೆಂಟೊ ಬಾಕ್ಸ್‌ ಅನ್ನು ಕೂಡ ಪರಿಚಯಿಸಲಾಗಿದೆ.

ರೆಸ್ಟೊರೆಂಟ್: ಟಾಯ್‌ಕಿ

ಸಮಯ: ಮಧ್ಯಾಹ್ನ 12ರಿಂದ ರಾತ್ರಿ 11

ವಿಶೇಷ: ಜಪಾನ್‌ ಶೈಲಿ

ವಿಳಾಸ: ‌‌ಟಾಯ್‌ಕಿ, #656, 100ಅಡಿ ರಸ್ತೆ, ಇಂದಿರಾನಗರ

ಟೇಬಲ್‌ ಕಾಯ್ದಿರಿಸಲು 8043703820

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !