ಬುಧವಾರ, ನವೆಂಬರ್ 13, 2019
22 °C

‘ತಲೈವರ್‌ 168’ ನಾಯಕಿ ಕೀರ್ತಿ ಸುರೇಶ್‌

Published:
Updated:
Prajavani

ನಟ ರಜನಿಕಾಂತ್‌ ಅಭಿನಯದ 168ನೇ ಚಿತ್ರ ‘ತಲೈವರ್‌ 168’ ಸಿನಿಮಾದ ನಾಯಕಿಯಾಗಿ ಕೀರ್ತಿ ಸುರೇಶ್‌ ನಟಿಸಲಿದ್ದಾರೆ.

ಇತ್ತೀಚೆಗೆ 27ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಕೀರ್ತಿ ಅವರನ್ನು ಮತ್ತೊಂದು ದೊಡ್ಡ ಸಿನಿಮಾದ ಅವಕಾಶವೊಂದು ಹುಡುಕಿಕೊಂಡು ಬಂದಿದೆ. ‘ತಲೈವರ್‌ 168’ ಚಿತ್ರದಲ್ಲಿ ಈ ಬಹುಭಾಷಾ ನಟಿ ರಜನಿಕಾಂತ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

‘ವಿಶ್ವಾಸಂ’ ಸಿನಿಮಾ ನಿರ್ದೇಶಿಸಿದ್ದ ಸಿರುತೈ ಶಿವ ಅವರೇ ಸೂಪರ್‌ ಸ್ಟಾರ್‌ ಅವರ ಈ ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಕೀರ್ತಿ ಸುರೇಶ್‌ ಅವರು ರಜನಿಕಾಂತ್‌ ಅವರ ಹರೆಯದ ಪಾತ್ರದ ಗೆಳತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಎಂದಿರನ್’ ಮತ್ತು ‘ಪೆಟ್ಟಾ’ ಸಿನಿಮಾ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

ಈ ಚಿತ್ರದಲ್ಲಿ ರಜನಿಕಾಂತ್‌ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.  ಈ ಚಿತ್ರದಲ್ಲಿ ಮತ್ತೊಂದು ಪಾತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಆ ಪಾತ್ರಕ್ಕೆ ಮಂಜು ವಾರಿಯರ್‌ ಹಾಗೂ ಜ್ಯೋತಿಕಾ ಹೆಸರು ಕೇಳಿಬರುತ್ತಿದೆ.

‘ಚಂದ್ರಮುಖಿ’ ಚಿತ್ರದಲ್ಲಿ ಜ್ಯೋತಿಕಾ, ರಜನಿಕಾಂತ್‌ ಜೊತೆ ನಟಿಸಿದ್ದರು.

ಪ್ರತಿಕ್ರಿಯಿಸಿ (+)