ಬುಧವಾರ, ನವೆಂಬರ್ 20, 2019
21 °C

ಅಫ್ಗಾನಿಸ್ತಾನ: ಮುಂದುವರಿದ ತಾಲಿಬಾನ್‌ ದಾಳಿ

Published:
Updated:

ಕಾಬೂಲ್‌ (ಎಪಿ): ಅಫ್ಗಾನಿಸ್ತಾನದ ಮಹಾನಗರಗಳಲ್ಲಿ ತಾಲಿಬಾನ್‌ ದಾಳಿ ಮುಂದುವರಿಸಿದ್ದು, ಪುಲಿ ಖುಮ್ರಿಯಲ್ಲಿ ಮತ್ತೊಮ್ಮೆ ಕ್ರೌರ್ಯ ಮೆರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಅತಿ ದೊಡ್ಡ ನಗರ ಕುಂದುಜ್‌ ಮೇಲೆ ತಾಲಿಬಾನ್‌ ದಾಳಿ ನಡೆಸಿತು. ಈ ದಾಳಿಯಲ್ಲಿ ಕನಿಷ್ಠ ಹದಿನಾರು ಮಂದಿ ಮೃತಪಟ್ಟಿದ್ದರು. 

ಅಫ್ಗಾನಿಸ್ತಾನದಲ್ಲಿ ಕಳೆದ 18 ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಮುಕ್ತಾಯಗೊಳಿಸಿ ಶಾಂತಿ ನೆಲೆಸುವಂತೆ ಮಾಡಲು ತಾಲಿಬಾನ್‌ ನಾಯಕರ ಜತೆಗೆ ಅಮೆರಿಕ ನಡೆಸುತ್ತಿರುವ ಮಾತುಕತೆ ಅಂತಿಮ ಹಂತದಲ್ಲಿರುವಾಗಲೇ ಈ ದಾಳಿಗಳು ನಡೆಯುತ್ತಿವೆ. 

ಪ್ರತಿಕ್ರಿಯಿಸಿ (+)