ತಾಲಿಬಾನ್‌ ಉಗ್ರರಿಂದ 12 ಮಂದಿ ಯೋಧರ ಹತ್ಯೆ

ಬುಧವಾರ, ಏಪ್ರಿಲ್ 24, 2019
33 °C

ತಾಲಿಬಾನ್‌ ಉಗ್ರರಿಂದ 12 ಮಂದಿ ಯೋಧರ ಹತ್ಯೆ

Published:
Updated:
Prajavani

ಕಾಬೂಲ್‌: ಪಶ್ಚಿಮ ಅಫ್ಗಾನಿಸ್ತಾನದ  ಬದ್ಗಿಸ್‌ ಪ್ರಾಂತ್ಯದಲ್ಲಿ ತಾಲಿಬಾನ್‌ ಉಗ್ರರು 48 ತಾಸಿನಲ್ಲಿ 12 ಮಂದಿ ಯೋಧರನ್ನು ಹತ್ಯೆಗೈದಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

‘ಉಗ್ರರ ಜೊತೆಗಿನ ಹೋರಾಟದಲ್ಲಿ ಅಫ್ಗಾನ್‌ ನ್ಯಾಷನಲ್‌ ಆರ್ಮಿಯ ಎಂಟು ಮಂದಿ ಯೋಧರು ಹಾಗೂ ನಾಲ್ವರು ಪೊಲೀಸರು ಮೃತಪಟ್ಟಿದ್ದಾರೆ’ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹತ್ತು ಮಂದಿ ಯೋಧರು ಹಾಗೂ 24 ಮಂದಿ ಪೊಲೀಸರು ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ 99 ಮಂದಿ ತಾಲಿಬಾನ್‌ ಉಗ್ರರು ಹತರಾಗಿದ್ದಾರೆ ಎಂದಿದ್ದಾರೆ.

ಕಾರ್ಯಾಚರಣೆ ನಡೆದ ಪ್ರದೇಶಗಳಿಂದ ಉಗ್ರರ ಮೃತದೇಹಗಳನ್ನು ತೆರವುಗೊಳಿಸಲು ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯಕರ್ತರಿಗೆ ಭದ್ರತಾ ಪಡೆ ಯೋಧರು ನೆರವು ನೀಡುತ್ತಿದ್ದಾರೆ ಎಂದೂ ತಿಳಿಸಿದ್ದಾರೆ.

ಅಫ್ಗಾನಿಸ್ತಾನ ಮತ್ತು ಅಮೆರಿಕ ಮೈತ್ರಿ ಪಡೆಯು ಉಗ್ರರ ಮೇಲೆ ಹಲವು ಬಾರಿ ವೈಮಾನಿಕ ದಾಳಿ ಕೂಡ ನಡೆಸಿದೆ. 

ಭದ್ರತಾ ಪಡೆಗಳ ಶಿಬಿರಗಳ ಮೇಲೆ ದಾಳಿ ನಡೆಸಿ 12 ಮಂದಿ ಯೋಧರನ್ನು ಹತ್ಯೆಗೈದಿದ್ದೇವೆ ಎಂದು ತಾಲಿಬಾನ್‌ ಹೇಳಿದೆ. ಕಳೆದ ವಾರ ಕೂಡ ಭದ್ರತಾ ಪಡೆಗಳ ಶಿಬಿರಗಳ ಮೇಲೆ ತಾಲಿಬಾನ್‌ ಉಗ್ರರು ದಾಳಿ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !