ಟ್ರಂಪ್–ಕಿಮ್ ಎರಡನೇ ಭೇಟಿಗೆ ಸಿದ್ಧತೆ

7

ಟ್ರಂಪ್–ಕಿಮ್ ಎರಡನೇ ಭೇಟಿಗೆ ಸಿದ್ಧತೆ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಉನ್ ಜಾಂಗ್ ನಡುವೆ ಎರಡನೇ ಭೇಟಿ ಸಂಬಂಧ ಮಾತುಕತೆ ನಡೆಯುತ್ತಿವೆ ಎಂದು ಶ್ವೇತಭವನ ತಿಳಿಸಿದೆ. 

ಸಿಂಗಪುರದಲ್ಲಿ ಕೆಲ ತಿಂಗಳ ಹಿಂದೆ ಉಭಯ ನಾಯಕರು ಮೊದಲ ಬಾರಿ ಭೇಟಿಯಾಗಿದ್ದರು. ಮತ್ತೊಂದು ಸುತ್ತಿನ ಮಾತುಕತೆ ಸಂಬಂಧ ಕಿಮ್ ಅವರು ಅಮೆರಿಕಕ್ಕೆ ಪತ್ರ ಬರೆದಿದ್ದಾರೆ.

ಉಭಯ ದೇಶಗಳ ನಡುವೆ ವೃದ್ಧಿಯಾಗುತ್ತಿರುವ ಸಂಬಂಧಕ್ಕೆ ಈ ಪತ್ರವೇ ಸಾಕ್ಷಿ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸರಾ ಸ್ಯಾಂಡರ್ಸ್ ಹೇಳಿದ್ದಾರೆ. ಎರಡೂ ದೇಶಗಳ ನಾಯಕರ ಸಭೆ ಹಾಗೂ ಅದರ ದಿನಾಂಕ ನಿಗದಿ ಮಾಡುವುದೇ ಪತ್ರದ ಆದ್ಯತೆಯ ವಿಷಯ ಎಂದು ಅವರು ತಿಳಿಸಿದ್ದಾರೆ. ಮಾತುಕತೆ ನಡೆಸುವುದರ ಪರವಾಗಿ ಇರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !