ಫೂಲನ್‌ ದೇವಿ ಪಾತ್ರಕ್ಕೆ ತನ್ನಿಷ್ಠಾ

ಬುಧವಾರ, ಜೂನ್ 19, 2019
29 °C

ಫೂಲನ್‌ ದೇವಿ ಪಾತ್ರಕ್ಕೆ ತನ್ನಿಷ್ಠಾ

Published:
Updated:
Prajavani

ಶೇಖರ್ ಕಪೂರ್ ಅವರ ಸಿನಿಮಾ ‘ಬ್ಯಾಂಡಿಟ್ ಕ್ವೀನ್’ ವಿಶ್ವದಾದ್ಯಂತ ಸಿನಿಪ್ರಿಯರ ನಡುವೆ ಸುದ್ದಿ ಮಾಡಿ ಇಪ್ಪತ್ತೈದು ವರ್ಷಗಳು ಸಂದಿವೆ. ಖ್ಯಾತ ಸಿನಿಮಾ ನಿರ್ಮಾಪಕ ಬಾಬಿ ಬೇಡಿ ಅವರು ಚಂಬಲ್ ಕಣಿವೆಯ ಡಕಾಯಿತೆ ಹಾಗೂ ಸಂಸತ್ತಿನ ಮಾಜಿ ಸದಸ್ಯೆ ಫೂಲ್‌ ದೇವಿ ಅವರ ಕುರಿತ 20 ಕಂತುಗಳ ವೆಬ್‌ ಸರಣಿ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ.

ಈ ವೆಬ್ ಸರಣಿಯ ಶೀರ್ಷಿಕೆ ‘ಫೂಲನ್ ದೇವಿ’ ಎಂದು ಇರಲಿದೆ. ಇದನ್ನು ತಿಗ್ಮಾಂಶು ಧುಲಿಯಾ ನಿರ್ದೇಶಿಸಲಿದ್ದಾರೆ. ಫೂಲನ್ ದೇವಿಯ ಪಾತ್ರವನ್ನು ತನ್ನಿಷ್ಠಾ ಚಟರ್ಜಿ ನಿಭಾಯಿಸಲಿದ್ದಾರೆ. ಧುಲಿಯಾ ಅವರು ‘ಬ್ಯಾಂಡಿಟ್ ಕ್ವೀನ್’ ಚಿತ್ರದಲ್ಲಿಯೂ ಕೆಲಸ ಮಾಡಿದ್ದರು. ತನ್ನಿಷ್ಠಾ ಅವರು ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್‌ ಡ್ರಾಮಾದಲ್ಲಿ ನಟನೆಯ ಪಾಠ ಕಲಿತವರು.

ಬೇಡಿ ಅವರು ಹೊಸ ವೆಬ್ ಸಿರೀಸ್ ಬಗ್ಗೆ ತಿಳಿಸಿದ್ದು ಕಾನ್‌ ಚಲನಚಿತ್ರೋತ್ಸವದ ಸಂದರ್ಭದಲ್ಲಿ. ವೆಬ್ ಸಿರೀಸ್ ಚಿತ್ರೀಕರಣ ಮುಂದಿನ ಕೆಲವು ತಿಂಗಳುಗಳಲ್ಲಿ ಆರಂಭವಾಗಲಿದೆ. ತಲಾ ಹತ್ತು ಕಂತುಗಳ ಎರಡು ಸೀಸನ್‌ಗಳಲ್ಲಿ ಇದು ಪ್ರಸಾರ ಆಗಲಿದೆ. ‘ಮೊದಲನೆಯ ಸೀಸನ್‌ ಫೂಲನ್ ಅವರ ಎಂಟು ವರ್ಷಗಳ ಜೈಲುವಾಸದೊಂದಿಗೆ ಕೊನೆಗೊಳ್ಳಲಿದೆ. ಎರಡನೆಯ ಸೀಸನ್‌ನಲ್ಲಿ ಅವರು ಜೈಲಿನಿಂದ ಬಿಡುಗಡೆ ಆದ ನಂತರದ ವಿದ್ಯಮಾನಗಳು ಇರಲಿವೆ’ ಎಂದು ಬೇಡಿ ಹೇಳಿದ್ದಾರೆ.

‘ಫೂಲನ್ ಅವರ ಜೈಲು ಶಿಕ್ಷೆಯನ್ನು ನಾಲ್ಕು ವರ್ಷಗಳ ಅವಧಿಗೆ ವಿಸ್ತರಿಸಲಾಗಿತ್ತು. ಆದರೆ ಅವರು ಬಿಡುಗಡೆ ಆದ ಎರಡೇ ವರ್ಷಗಳಲ್ಲಿ ಸಂಸತ್ ಸದಸ್ಯೆಯಾದರು. ಕೆಳ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಭಾರತದ ಹೆಣ್ಣುಮಗಳೊಬ್ಬಳು ಎಷ್ಟೆಲ್ಲಾ ಅವಮಾನಗಳನ್ನು ಎದುರಿಸಬೇಕಾಯಿತು ಎಂಬುದು ಬ್ಯಾಂಡಿಟ್ ಕ್ವೀನ್ ಚಿತ್ರದಲ್ಲಿ ಇತ್ತು. ಜಾತಿ ಆಧಾರಿತ ದಬ್ಬಾಳಿಕೆಯನ್ನು ಮೆಟ್ಟಿನಿಲ್ಲುವ ಅಂಶಗಳು ಆ ಚಿತ್ರದಲ್ಲಿದ್ದವು’ ಎಂದರು ಬೇಡಿ.

ಬ್ಯಾಂಡಿಟ್ ಕ್ವೀನ್‌ ಚಿತ್ರದ ಕಥೆಯನ್ನು ಮುಂದುವರಿಸುವ ಇನ್ನೊಂದು ಕಥೆ ಹೊಸೆಯುವ ಆಲೋಚನೆ ಬೇಡಿ ಅವರಲ್ಲಿ ಬಹುಕಾಲದಿಂದ ಇತ್ತು. ‘ಈ ಹೊತ್ತಿನಲ್ಲಿ ವೆಬ್ ಸಿರೀಸ್‌ಗಳ ಯುಗ ಆರಂಭವಾಯಿತು. ಹೊಸ ಸಿನಿಮಾ ಮಾಡುವ ಬದಲು ವೆಬ್ ಸಿರೀಸ್ ಮಾಡುವುದು ಉತ್ತಮ ಎಂದು ನಾವು ಭಾವಿಸಿದೆವು’ ಎನ್ನುವುದು ಬೇಡಿ ನೀಡುವ ವಿವರಣೆ.

ಫೂಲನ್ ಅವರ ಪಾತ್ರವನ್ನು ತನ್ನಿಷ್ಠಾ ಅವರೇ ನಿಭಾಯಿಸಬೇಕು ಎಂದು ಬೇಡಿ ಅವರು ಮೊದಲೇ ತೀರ್ಮಾನ ಮಾಡಿ ಆಗಿತ್ತು. ವೆಬ್ ಸರಣಿಯು ಬ್ಯಾಂಡಿಟ್ ಕ್ವೀನ್‌ನಂತೆ ಇರುವುದಿಲ್ಲ ಎಂಬುದನ್ನು ಮನವರಿ ಮಾಡಿಕೊಟ್ಟ ತಕ್ಷಣ, ಇದರಲ್ಲಿ ನಟಿಸಲು ತನ್ನಿಷ್ಠಾ ಒಪ್ಪಿಕೊಂಡರು.

‘ಬ್ಯಾಂಡಿಟ್ ಕ್ವೀನ್ ಬಿಡುಗಡೆ ಆದ ಕೆಲವು ವರ್ಷಗಳ ನಂತರ ಆ ಸಿನಿಮಾ ವೀಕ್ಷಿಸಿದೆ. ನಾನು ಆ ಸಿನಿಮಾ ನೋಡಿದ್ದು ಪೋಲೆಂಡ್‌ನಲ್ಲಿ. ಹೊಸ ವೆಬ್ ಸಿರೀಸ್‌ ಈ ಸಿನಿಮಾದ ರಿಮೆಕ್‌ ಅಲ್ಲ, ಅದರ ಮುಂದುವರಿಕೆಯಂತೆಯೂ ಕಾಣುವುದಿಲ್ಲ’ ಎನ್ನುತ್ತಾರೆ ತನ್ನಿಷ್ಠಾ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !