ನಾನಾ ಪಾಟೇಕರ್‌ ವಿರುದ್ಧ ತನುಶ್ರೀ ದತ್ತಾ ದೂರು

7
ಲೈಂಗಿಕ ಕಿರುಕುಳ ಪ್ರಕರ‌ಣ

ನಾನಾ ಪಾಟೇಕರ್‌ ವಿರುದ್ಧ ತನುಶ್ರೀ ದತ್ತಾ ದೂರು

Published:
Updated:

ಮುಂಬೈ: 2008ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್‌ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಿ ನಟಿ ತನುಶ್ರೀ ದತ್ತಾ ಶನಿವಾರ ದೂರು ದಾಖಲಿಸಿದ್ದಾರೆ.

‘ಹಾರ್ನ್‌ ಓಕೆ ಪ್ಲೀಸ್‌’ ಸಿನಿಮಾದ ಹಾಡು ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್‌, ಅಸಭ್ಯವಾಗಿ ವರ್ತಿಸಿದ್ದರು ಎಂದು ದತ್ತಾ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾನಾ ಪಾಟೇಕರ್‌, ನೃತ್ಯ ಸಂಯೋಜಕ ಗಣೇಶ್‌ ಆಚಾರ್ಯ, ನಿರ್ಮಾಪಕ ಸಮೀರ್‌ ಸಿದ್ಧಿಕಿ, ನಿರ್ದೇಶಕ ರಾಕೇಶ್‌ ಸಾರಂಗ್‌ ವಿರುದ್ಧ ಓಶಿವಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಈ ಸಂಬಂಧ ತನುಶ್ರೀ ಪೊಲೀಸರ ಮುಂದೆ ಭಾನುವಾರ ಹೇಳಿಕೆಯನ್ನು ನೀಡಿದ್ದು, ಈ ಬಗ್ಗೆ ಪೊಲೀಸರು ಆದಷ್ಟು ಬೇಗ ತನಿಖೆ ಆರಂಭಿಸಲಿದ್ದಾರೆ’ ಎಂದು ಅವರ ವಕೀಲ ನಿತಿನ್‌ ಸತ್ಫುಟೆ ತಿಳಿಸಿದ್ದಾರೆ.

ತನುಶ್ರೀ ಅವರು ಇದೇ ರೀತಿಯ ದೂರನ್ನು 2008ರಲ್ಲಿ ಕೂಡ ದಾಖಲಿಸಿದ್ದರು ಎಂದರು. 

ತನುಶ್ರೀ ಆರೋಪ ಏನು ? 
‘ಸಿನಿಮಾ ಶೂಟಿಂಗ್‌ನ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸಿದ್ದ ಪಾಟೇಕರ್‌, ನನ್ನ ಕೈ ಹಿಡಿದು ಯಾವ ರೀತಿ ನಟಿಸಬೇಕು ಎಂದು ತೋರಿಸಿಕೊಟ್ಟರು. ಅವರು ಅಸಭ್ಯವಾಗಿ ಮುಟ್ಟಿದ ವೇಳೆ, ನನಗೂ ತೀವ್ರ ಮುಜುಗರವಾಯಿತು. ಇದನ್ನು ನಾನು ವ್ಯಕ್ತಪಡಿಸಿದ ವೇಳೆ ಅವರು ಕೋಪಗೊಂಡರು. ಈ ವಿಚಾರವನನ್ನು ತಕ್ಷಣವೇ ಗಣೇಶ್‌ ಆಚಾರ್ಯ, ರಾಕೇಶ್‌ ಅವರಿಗೂ ತಿಳಿಸಿದ್ದೆ. ಆದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪಾಟೇಕರ್‌ ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದುದು ಚಿತ್ರರಂಗದಲ್ಲಿ ಎಲ್ಲರಿಗೂ ತಿಳಿದಿದ್ದರೂ ಯಾರೂ ಬಾಯಿ ಬಿಟ್ಟಿರಲಿಲ್ಲ ಎಂದು ದೂರಿರುವ ತನುಶ್ರೀ, ‘ಪಾಟೇಕರ್‌ ಯಾವುದೇ ಚಿತ್ರೀಕರಣದ ಸೆಟ್‌ನಲ್ಲಿಯೂ ಹೆಣ್ಣು ಮಕ್ಕಳೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿರಲಿಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !