ತನ್ವೀರ್ ನೋವಿಗೆ ಮಿಡಿದ ಹೃದಯಗಳು

ಸೋಮವಾರ, ಮೇ 27, 2019
27 °C

ತನ್ವೀರ್ ನೋವಿಗೆ ಮಿಡಿದ ಹೃದಯಗಳು

Published:
Updated:

‍ಪೊಲೀಸರಿಂದ ಅಮಾನವೀಯವಾಗಿ ದೌರ್ಜನ್ಯಕ್ಕೀಡಾದ ಯುವಕ ತನ್ವೀರ್ ಕುರಿತು ‘ಮೆಟ್ರೊ’ ಮಾಡಿದ ವಿಸ್ತ್ರೃತ ವರದಿಗೆ ಹಲವು ಓದುಗರು ಸ್ಪಂದಿಸಿದ್ದಾರೆ. ತನ್ವೀರ್ ನೋವಿಗೆ ಮಿಡಿದ ಹಲವರು, ಪೊಲೀಸ್ ದೌರ್ಜನ್ಯ, ಸರ್ಕಾರದ ನಿರ್ಲಕ್ಷ್ಯಕುರಿತು ‘ಪ್ರಜಾವಾಣಿ ಫೇಸ್‌ ಬುಕ್‌’ ಅಕೌಂಟ್‌ಗೆ ಪ್ರತಿಕ್ರಿಯಿಸಿ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕಾನೂನು ಇರುವುದು ಜನ ಹಿತ ಕಾಪಾಡಲು, ಅಂಥ ಕಾನೂನೇ ದೌರ್ಜನ್ಯ ಮಾಡಿದರೆ ಯಾರ ಬಳಿ ರಕ್ಷಣೆ ಪಡೆಯುವುದು ಎನ್ನುವುದು ಬಹುತೇಕರ ಅಭಿಮತ. ಮಾನವೀಯತೆ, ಅಂತಃಕರಣ ಅನ್ನುವುದು ಜಾತಿ, ಧರ್ಮ ಮೀರಿದ್ದು ಅನ್ನುವಂಥದ್ದನ್ನು ತನ್ವೀರ್ ನೋವಿಗೆ ಮಿಡಿದ ಅನೇಕರ ಹಾರೈಕೆಗಳಲ್ಲಿದೆ. ಖಾಕಿ ತೊಟ್ಟು, ಲಾಠಿ ಹಿಡಿವವರಲ್ಲಿ ಮಾನವೀಯತೆಯೂ ಇರಲಿ ಎಂಬುದು ಬಹುತೇಕ ಓದುಗರ ಅಭಿಲಾಷೆ.

ಗೆಟ್ ವೆಲ್ ಸೂನ್ ತನ್ವೀರ್

– ಗಾಯತ್ರಿ ಶ್ರೀಧರ್

ಹೇಗಿದೆ ನಮ್ಮ ಪೊಲೀಸ್ ಕರ್ತವ್ಯಪರತೆ

–ವಿ. ಪ್ರಸನ್ನಕುಮಾರ್

ಪೂರ್ಣ ನಿಜಾಂಶ ಹೊರಬರಲಿ

–ಸೂರ್ಯ

ಯಾರೇ ಅನ್ಯಾಯ ಮಾಡಲಿ ಕಾನೂನು ರೀತಿಯಲ್ಲಿ ಸರಿಯಾದ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಈ ರೀತಿಯ ದೌರ್ಜನ್ಯ ಖಂಡನೀಯ. ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶ ಮಾಡಲಿ, ದೌರ್ಜನ್ಯ ಮಾಡಿದ ಪೊಲೀಸರಿಗೆ ಕಠಿಣ ಶಿಕ್ಷೆಯಾಗಲಿ. 

–ಖಲೀಲ್ ಪಟ್ವೇಗರ್

ಗೃಹಸಚಿವರು ಏನು ಮಾಡುತ್ತಿದ್ದಾರೆ? ಸರ್ಕಾರ ಇದೆಯೋ ಇಲ್ಲವೋ?

–ಶ್ರೀನಿವಾಸ ನಾಯ್ಡು

ಮನುಷ್ಯತ್ವ ಇಲ್ಲದವರು

–ಪ್ರಶಾಂತ್ ವಿ. ಶೆಟ್ಟಿ 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !